ವಿಶ್ವದಾದ್ಯಂತ ಕ್ರಿಸ್‍ಮಸ್ ಸಂಭ್ರಮ – ಕಣ್ಮನ ಸೆಳೀತಿದೆ ಶಿವಾಜಿನಗರದ ಸೆಂಟ್ ಬೆಸಿಲಿಕಾ ಚರ್ಚ್

ಬೆಂಗಳೂರು: ದೇಶಾದ್ಯಂತ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ. ಎಲ್ಲಾ ಚರ್ಚ್‍ಗಳಲ್ಲಿ ಕ್ರಿಶ್ಚಿಯನ್ನರು ಯೇಸುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಕೆಜಿಎಫ್ ಸೇರಿದಂತೆ ರಾಜ್ಯದ ಎಲ್ಲಾ ಚರ್ಚ್‍ಗಳು ವರ್ಣರಂಜಿತವಾಗಿದ್ದು, ಕಣ್ಮನ ಸೆಳೀತಿದೆ.

ಬೆಂಗಳೂರಿನಲ್ಲಿ ಕ್ರಿಸ್‍ಮಸ್ ಆಚರಣೆ ಜೋರಾಗಿದೆ. ಕ್ಯಾಥೋಲಿಕರ ಅತ್ಯಂತ ಪ್ರಾಚೀನ ಚರ್ಚ್‍ಗಳಲ್ಲಿ ಒಂದಾದ ಶಿವಾಜಿನಗರದ ಸಂತ ಮರಿಯ ಬೆಸಲಿಕ್ ಚರ್ಚಿನಲ್ಲಿ ತಡರಾತ್ರಿಯಿಂದಲೇ ಕ್ರಿಸ್‍ಮಸ್ ಆಚರಣೆ ಜೋರಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನ ಚರ್ಚಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ರು. ವಿದ್ಯುತ್ ದೀಪಾಲಂಕಾರದೊಂದಿಗೆ ಚರ್ಚ್ ಝಗಮಗಿಸುತ್ತಿತ್ತು. ಯುವ ಜನತೆ ಸಾಂತಾ ಕ್ಲಾಸ್ ಟೋಪಿಗಳನ್ನ ಧರಿಸಿ ಸೆಲ್ಫೀ ಮೂಡ್ ನಲ್ಲಿದ್ರು.

ಬೆಸಿಲಿಕ ಚರ್ಚಿಗೆ ಕೇವಲ ಕ್ರೈಸ್ತರು ಮಾತ್ರವಲ್ಲದೇ ಎಲ್ಲಾ ಧರ್ಮಿಯರು ಆಗಮಿಸಿ ಕ್ರಿಸ್ ಮಸ್ ಆಚರಣೆ ಮಾಡಿದ್ರು. ಅತ್ತ ಬೇಥ್ಲೆಹೇಮ್, ಜೆರುಸಲೇಂ, ರೋಮ್, ವ್ಯಾಟಿಕನ್ ಸಿಟಿಗಳಲ್ಲಿ ಕ್ರಿಸ್‍ಮಸ್ ಸಂಭ್ರಮ ಉಕ್ಕಿ ಹರೀತಿದೆ. ಈ ಮಧ್ಯೆ ಒಡಿಶಾದ ಪುಚಿ ಸಮುದ್ರ ತೀರದಲ್ಲಿ ವಿಶ್ವದ ಅತಿದೊಡ್ಡ ಸಾಂತಾ ಕ್ಲಾಸ್ ಚಿತ್ರವನ್ನ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಬಿಡಿಸಿದ್ದಾರೆ.

ಮಂಗಳೂರಿನ ಬಹುತೇಕ ಎಲ್ಲ ಚರ್ಚ್‍ಗಳಲ್ಲಿಯೂ ರಾತ್ರಿಯೇ ವಿಶೇಷ ಪ್ರಾರ್ಥನೆ ನಡೆದ್ವು. ಕುಲಶೇಖರ, ಆಗ್ನೆಸ್, ಮಿಲಾಗ್ರಿಸ್ ಸೇರಿದಂತೆ ಮಂಗಳೂರಿನ ಹೆಸರಾಂತ ಚರ್ಚ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರೈಸ್ತರು ಸೇರಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲೂ ಕ್ರಿಸ್‍ಮಸ್ ಸಂಭ್ರಮ ಮನೆ ಮಾಡಿದೆ. ಕಾರವಾರ ನಗರದ ಕ್ಯಾಥಡ್ರಲ್ ಚರ್ಚನಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು.

ಶಿವಮೊಗ್ಗದಲ್ಲಿ ಕ್ರೈಸ್ತರು ಕ್ರಿಸ್‍ಮಸ್ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಮಧ್ಯರಾತ್ರಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಿವಮೊಗ್ಗ ಪ್ರಾಂತ್ಯ ಧರ್ಮಾಧ್ಯಕ್ಷ ಪ್ರಾಸಿಸ್ ಮೊರಾಸ್ ವಿಶೇಷ ಪೂಜೆ ಸಲ್ಲಿಸಿ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದರು.

 

Comments

Leave a Reply

Your email address will not be published. Required fields are marked *