ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

ಮುಂಬೈ: ಬಾಲಿವುಡ್ ನೃತ್ಯ ನಿರ್ದೇಶಕ ಚಲನಚಿತ್ರ ನಿರ್ಮಾಪಕ ರೆಮೋ ಡಿಸೋಜಾ ಅವರ ಸೋದರ ಮಾವ ಜೇಸನ್ ವಾಟ್ಕಿನ್ಸ್(42) ಮುಂಬೈನ ಮಿಲ್ಲತ್ ನಗರದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜೇಸನ್ ವಾಟ್ಕಿನ್ಸ್ ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದು ತೀವ್ರವಾದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ

 

View this post on Instagram

 

A post shared by Remo Dsouza (@remodsouza)

ಘಟನೆಯ ವೇಳೆ ಜೇಸನ್ ವಾಟ್ಕಿನ್ಸ್ ತಮ್ಮ ಫ್ಲಾಟ್‍ನಲ್ಲಿ ಒಬ್ಬಂಟಿಯಾಗಿದ್ದರು. ಅವರ ಪೋಷಕರು ಔಷಧಗಳನ್ನು ಖರೀದಿಸಲು ಹೊರಗೆ ಹೋಗಿದ್ದರು. ಮತ್ತೆ ಅವರು ಹಿಂತಿರುಗಿದಾಗ ನೇಣು ಬಿಗಿದಿರುವುದನ್ನು ಕಂಡಿದ್ದಾರೆ. ನಂತರ ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಜೇಸನ್ ವಾಟ್ಕಿನ್ಸ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ವಾಟ್ಕಿನ್ಸ್ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.


=

Comments

Leave a Reply

Your email address will not be published. Required fields are marked *