ಸಿಎಂ ತವರಿನಲ್ಲಿ ಮೂವರಲ್ಲಿ ಕಾಲರಾ ಪತ್ತೆ

– 4 ಬೋರ್‌ವೆಲ್ ತಾತ್ಕಾಲಿಕ ಸ್ಥಗಿತ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ತವರು ಜಿಲ್ಲೆಯಲ್ಲಿ ಕಾಲರಾ (Cholera) ರೋಗ ಪತ್ತೆಯಾಗಿದೆ.

ಒಂದೇ ಗ್ರಾಮದ ಮೂವರಲ್ಲಿ ಕಾಣಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕೆಲವರಲ್ಲಿ ವಾಂತಿ-ಭೇದಿ ಆರಂಭವಾಗಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಿದೆ.

ಕಳೆದ ಒಂದು ವಾರದಿಂದ ಇಲಾಖೆ ಸತತ 114 ಜನರನ್ನ ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ಮೂವರಲ್ಲಿ ಕಾಲರಾ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಡಿಎಚ್‍ಓ ಶಿವಕುಮಾರ್ ಸ್ವಾಮಿ ಸೆರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

ಬೋರ್ ವೆಲ್ ನೀರಿನಿಂದ ಕಾಲರ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದರಿಂದ ಗ್ರಾಮದ ನಾಲ್ಕು ಬೋರ್‍ವೆಲ್ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಆರೋಗ್ಯ ಅಧಿಕಾರಿಗಳು ನೀರಿನ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ ಮುಂಜಾಗೃತ ಕ್ರಮವಾಗಿ 6 ಜನ ವೈದ್ಯರು, ಅಂಬುಲೆನ್ಸ್ ವಾಹನ ನಿಯೋಜನೆ ಮಾಡಲಾಗಿದೆ.