ಬಿಜೆಪಿ ಮುಗಿಸಲು ಪಕ್ಷ ಕಟ್ಟಿದ ಶ್ರೀರಾಮುಲುರನ್ನು ನಾವು ಸೋಲಿಸೋಕಾಗುತ್ತಾ- ಡಿಕೆಶಿ ವ್ಯಂಗ್ಯ

ಚಿತ್ರದುರ್ಗ: ಬಳ್ಳಾರಿ ಉಪಚುನಾವಣೆ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಅವರ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಇಬ್ಬರೂ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಶ್ರೀರಾಮುಲು ಅವರನ್ನು ನಾವು ಸೋಲಿಸುವುದಕ್ಕೆ ಆಗುತ್ತಾ ಎನ್ನುವ ಮೂಲಕ ಇಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ನಗರದ ಮುರುಘಾ ಶರಣರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಸಚಿವರು, ಶ್ರೀರಾಮುಲು ಅವರೇ ಪಕ್ಷ ಕಟ್ಟಿ, ಬಿಜೆಪಿ ಸೋಲಿಸಲು ಹೊರಟಿದ್ದರು. ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ ಎಂದು ಲೇವಡಿ ಮಾಡಿದ ಸಚಿವರು, ನನಗೆ ಯಾವುದೇ ವರ್ಚಸ್ಸಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಅಷ್ಟೇ ಅಲ್ಲದೆ ನನಗೆ ಅಧಿಕಾರವಿದೆ ಅಂತಾ ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.

ಪ್ರತ್ಯೇಕ ಲಿಂಗಾಯತ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡಲು ಮುಕ್ತ ಅವಕಾಶವಿದೆ. ನನ್ನ ಅಭಿಪ್ರಾಯ ಹೇಳಿಕೊಂಡಿದ್ದೇನೆ ಅಷ್ಟೇ ಎಂದು ತಿಳಿಸಿದರು. ಬಜೆಟ್‍ನಲ್ಲಿ ತಿಳಿಸಿದಂತೆ ವೈದ್ಯಕೀಯ ಕಾಲೇಜು ತೆರೆಯಲು ಹಾಗೂ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಸೂಕ್ತ ಕಾನೂನು ಹಾಗೂ ನಿಯಮ ಪಾಲನೆ ಮೂಲಕ ಹಂತ ಹಂತವಾಗಿ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *