ಚಿರು ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್

ಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡವು ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮ್ ನಾರಾಯಣ್, ವಿಶೇಷ ಸುದ್ದಿಯೊಂದನ್ನು ನೀಡಿದ್ದಾರೆ. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಲಿದ್ದಾರಂತೆ. ಸಿನಿಮಾ ರೆಡಿಯಾಗಿ ಒಂದು ವರ್ಷವೇ ಆಗಿದೆ. ರಾಯನ್ ರಾಜ್ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ಹಾಗಾಗಿ ರಾಯನ್ ಯಾವ ರೀತಿಯಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಕುತೂಹಲದ ವಿಷಯ. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ರಾಜ್ ಅವರ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿ ಫೋಟೋ ಬಂದಾಗಲೂ ಚಿರು ಅಭಿಮಾನಿಗಳು ಮತ್ತು ಮೇಘನಾ ರಾಜ್ ಅಭಿಮಾನಿಗಳು ಪ್ರೀತಿಯಿಂದ ಅವುಗಳನ್ನು ಬರಮಾಡಿಕೊಳ್ಳುತ್ತಾರೆ. ಈ ಬಾರಿ ಬಿಗ್ ಸ್ಕ್ರೀನ್ ನಲ್ಲೇ ರಾಯನ್ ರಾಜ್ ಅವರನ್ನು ಅಭಿಮಾನಿಗಳು ನೋಡಬಹುದಾಗಿದೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

ಮೊನ್ನೆಯಷ್ಟೇ ತೆರೆ ಕಂಡಿರುವ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದಲ್ಲಿ ಅಪ್ಪು ನಿಧನದ ನಂತರ ಅವರ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತು ಎನ್ನುವ ಅಪ್ಪು ಅಭಿಮಾನಿಗಳ ಆಸೆಯನ್ನು ನಿರ್ದೇಶಕ ಚೇತನ್ ಕುಮಾರ್ ಪೂರೈಸಿದ್ದರು. ಇದಗ ರಾಯನ್ ರಾಜ್ ಕೂಡ ತಮ್ಮ ತಂದೆಯ ಕೊನೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪ್ಪನ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *