ಚಿರಂಜೀವಿ, ರಾಮ್ ಚರಣ್ ಭೇಟಿಯಾದ ಪ್ರಶಾಂತ್ ನೀಲ್ – ಕಾರಣವೇನು ಗೊತ್ತಾ?

ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ನಟ ಚಿರಂಜೀವಿ ಹಾಗೂ ನಟ ರಾಮ್ ಚರಣ್ ತೇಜ ಅವರನ್ನು ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿ ಮಾಡಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ನಟ ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪ್ರಶಾಂತ್ ನೀಲ್ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕಂಡರು. ನಂತರ ರಾಕಿಂಗ್ ಸ್ಟಾರ್ ಯಶ್‍ಗೆ ಕೆಜಿಎಫ್ ಸಿನಿಮಾವನ್ನು ನಿರ್ದೇಶಿಸಿ, ಬಿಗ್ ಹಿಟ್ ಪಡೆಯುವುದರ ಜೊತೆಗೆ ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಸೃಷ್ಟಿಸಿತು. ಈ ಸಿನಿಮಾ ಯಶ್‍ಗೆ ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಟ್ಟಿದ್ದಲ್ಲದೇ ಪ್ರಶಾಂತ್‍ಗೂ ಕೂಡ ದೊಡ್ಡ ನೇಮ್, ಫ್ರೇಮ್ ತಂದು ಕೊಟ್ಟಿತು.  ಇದನ್ನೂ ಓದಿ: ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

ಕೆಜಿಎಫ್ ಸಕ್ಸಸ್ ನಂತರ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್‍ಗೆ ಪರಭಾಷಾ ಬಿಗ್ ಸ್ಟಾರ್‌ಗಳ ಸಿನಿಮಾ ನಿರ್ದೇಶಿಸಲು ಅವಕಾಶಗಳ ಮಳೆಯೇ ಹರಿದುಬರುತ್ತಿದೆ. ಈ ಮಧ್ಯೆ ಪ್ರಶಾಂತ್ ವಿಜಯದಶಮಿ ಹಬ್ಬದ ದಿನದಂದು ಚಿರಂಜೀವಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮ್ ಚರಣ್ ಹಾಗೂ ಚಿರಂಜೀವಿ ಜೊತೆ ಪ್ರಶಾಂತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾನು ತಡ ಮಾಡಿದ್ದೇನೆ ಎಂಬುದು ಗೊತ್ತು: ರಶ್ಮಿಕಾ ಮಂದಣ್ಣ

ಚಿರಂಜೀವಿ ಹಾಗೂ ರಾಮ್ ಚರಣ್ ಜೊತೆ ಬಹಳ ಕ್ಲೋಸ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಪ್ರಶಾಂತ್ ನೀಲ್ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ, ನಾನು ಇಂದು ಲೆಜೆಂಡ್ ರನ್ನು ಭೇಟಿಯಾದೆ. ಅದ್ಭುತ ಆತಿಥ್ಯ ನೀಡಿದ ರಾಮ್‍ಚರಣ್ ಅವರಿಗೆ ಧನ್ಯವಾದ. ಚಿಕ್ಕವಯಸ್ಸಿನಲ್ಲಿ ಚಿರಂಜೀವಿ ಅವರನ್ನು ಭೇಟಿಯಾಗುವ ನನ್ನ ಬಾಲ್ಯದ ಕನಸು ಈಗ ನನಸಾಯಿತು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

 

View this post on Instagram

 

A post shared by Prashanth Neel (@prashanthneel)

ವಿಶೇಷವೆಂದರೆ ಪ್ರಶಾಂತ್ ಜೊತೆ ನಿರ್ಮಾಪಕ ಡಿವಿವಿ ದಾನಯ್ಯ ಕೂಡ ಚಿರಂಜೀವಿ ಮನೆಗೆ ಭೇಟಿ ನೀಡಿದ್ದು, ಈ ಮೂವರ ಕಾಂಬಿನೇಷನ್‍ನಲ್ಲಿ ಸಿನಿಮಾ ಬರಲಿದ್ಯಾ ಎಂಬ ಪ್ರಶ್ನೆ ಎದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ರಾಮ್ ಚರಣ್ ಕಾಲಿವುಡ್ ನಿರ್ದೇಶಕ ಶಂಕರ್ ನಿದೇಶಿಸುತ್ತಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ನನ್ನ ಹಾಗೂ ಸೂರಪ್ಪ ಬಾಬು ಮಧ್ಯೆ ಮನಸ್ತಾಪ ಇರೋದು ನಿಜ: ಸುದೀಪ್

Comments

Leave a Reply

Your email address will not be published. Required fields are marked *