ನಟ ಚಿರಂಜೀವಿ ಭೇಟಿಗಾಗಿ 600 ಕಿ.ಮೀ ಸೈಕಲ್ ತುಳಿದ ಅಭಿಮಾನಿ

ಹೈದರಾಬಾದ್: ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಲು ಅಭಿಮಾನಿಯೊಬ್ಬರು 600ಕಿ.ಮೀ ಸೈಕಲ್ ತುಳಿದುಕೊಂಡು ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಎನ್. ಈಶ್ವರಯ್ಯ ಚಿತ್ತೂರಿನವರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಅವರ ಊರಿಂದ ಹೈದರಾಬಾದ್‍ಗೆ ಸುಮಾರು 600 ಕಿ.ಮೀ ಅಂತರ. ಈ ದೂರ ಬಂದು ನೆಚ್ಚಿನ ನಟನನ್ನು ಭೇಟಿಯಾಗಿದ್ದಾರೆ. ಇವರು ಈ ಪ್ರಯಾಣವನ್ನು ಮಾಡಲು 12 ದಿನ ತೆಗೆದುಕೊಂಡಿದ್ದಾರೆ. ಚಿರಂಜೀವಿಗೆ ಒಳ್ಳೆಯದಾಗಲಿ ಎಂದು ಈಶ್ವರಯ್ಯ ಅವರು ಹನುಮ ದೀಕ್ಷೆಯನ್ನೂ ತೊಟ್ಟಿದ್ದಾರೆ ಅನ್ನೋದು ವಿಶೇಷವಾಗಿದೆ. ಇದನ್ನೂ ಓದಿ:  ಮೈಸೂರು ಗ್ಯಾಂಗ್‍ರೇಪ್- ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

ನಿವಾಸದ ಬಳಿ ಬಂದ ಈಶ್ವರಯ್ಯ ಅವರನ್ನು ಚಿರಂಜೀವಿ ಭೇಟಿ ಮಾಡಿದ್ದಾರೆ. ನಮ್ಮ ಬಗ್ಗೆ ಅಭಿಮಾನಿಗಳು ಹೀಗೆ ಯೋಚನೆ ಮಾಡುತ್ತಾರೆ. ನಮ್ಮ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೋಸ್ಕರ ಒಳಿತನ್ನು ಬಯಸುತ್ತೇವೆ ಎಂದಿದ್ದಾರೆ. 12 ದಿನಗಳ ಕಾಲ ಸೈಕಲ್ ತುಳಿಯುವುದು ಎಂದರೆ ಅದು ಸುಲಭದ ಕೆಲಸವಲ್ಲ. ಹೀಗಾಗಿ ಇನ್ನುಮುಂದೆ ಈ ರೀತಿ ಮಾಡದಂತೆ ಚಿರಂಜೀವಿ ಅವರು ಅಭಿಮಾನಿಗೆ ಕಿವಿಮಾತು ಹೇಳಿದ್ದಾರೆ.

ನೆಚ್ಚಿನ ನಟನಿಗೋಸ್ಕರ ಅಭಿಮಾನಿಗಳು ಏನು ಮಾಡೋಕೂ ರೆಡಿ ಇರುತ್ತಾರೆ. ದೂರದ ಊರುಗಳಿಂದ ನಡೆದು ಬಂದು ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ತಾವು ಇಷ್ಟಪಡುವ ನಟನಿಗೆ ಒಳ್ಳೆಯದಾಗಲಿ ಎಂದು ಹರಕೆ ಹೊತ್ತಿಕೊಳ್ಳುವ ಅಭಿಮಾನಿಗಳೂ ಇದ್ದಾರೆ.

Comments

Leave a Reply

Your email address will not be published. Required fields are marked *