ಬೇಹುಗಾರಿಕೆಯಲ್ಲಿ ತೊಡಗಿದ್ದ ಚೀನಾದ ಗೂಢಚಾರನ ಬಂಧನ: ಆತನ ಬಳಿ ಸಿಕ್ಕಿದ್ದು ಏನು?

ನವದೆಹಲಿ: ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ದೆಹಲಿಯ ಪೊಲೀಸರು ಚೀನಾದ ಗೂಢಾಚಾರನೊಬ್ಬನನ್ನು ಬಂಧಿಸಿದ್ದಾರೆ.

39 ವರ್ಷದ ಚಾರ್ಲಿ ಪೆಂಗ್ ಬಂದಿತ ಚೀನಾದ ಗೂಢಚಾರ. ಆರೋಪಿಯನ್ನು ಸೆಪ್ಟಂಬರ್ 13ರಂದು ಮಂಜು ಕಾ ತಿಲ್ಲಾ ಎಂಬಲ್ಲಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಬಳಿ ಭಾರತೀಯ ಪಾಸ್‍ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷ ರೂಪಾಯಿ ನಗದು, ಒಂದು ಕಾರು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಕೊಂಡಿದ್ದಾರೆ. ಇದಲ್ಲದೇ 2,000 ಸಾವಿರ ಅಮೆರಿಕನ್ ಡಾಲರ್ ಹಾಗೂ 2,000 ಥಾಯ್ ಕರೆನ್ಸಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಚಾರ್ಲಿ ಪೆಂಗ್ ಒಬ್ಬ ನುರಿತ ಗುಢಾಚಾರನೆಂದು ಹೇಳಲಾಗುತ್ತಿದೆ. ಈತ 5 ವರ್ಷಗಳ ಹಿಂದೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದ್ದನು. ಅಲ್ಲದೇ ಪದೇ ಪದೇ ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

ಈತ ಭಾರತೀಯ ಯುವತಿಯನ್ನು ವಿವಾಹವಾಗಿ ಆಕೆಯ ಮೂಲಕ ಮಣಿಪುರ ವಿಳಾಸದ ಆಧಾರದ ಮೇಲೆ ಭಾರತದ ಆಧಾರ್ ಕಾರ್ಡ್ ಹಾಗೂ ಪಾಸ್‍ಪೋರ್ಟ್ ಹೊಂದಿದ್ದನು. ಈತ ದೆಹಲಿಯ ಗುರುಗ್ರಾಮದಲ್ಲಿ ವಿದೇಶಿ ವಿನಿಯ ಕರೆನ್ಸಿ ಕಚೇರಿಯನ್ನು ಹೊಂದಿ ಬೇಹುಗಾರಿಕೆಯನ್ನು ನಡೆಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಚಾರ್ಲಿ ಪೆಂಗ್ ತನ್ನ ವಿದೇಶಿ ವಿನಿಮಯ ಕಚೇರಿಯ ಮೂಲಕ ಹವಾಲ ದಂದೆ ನಡೆಸುತ್ತಿದ್ದರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಈತನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಚಾರ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಆರೋಪಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *