ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

ಬೀಜಿಂಗ್: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿಕೊಂಡು ಚೀನಿ ಹ್ಯಾಕರ್‍ಗಳು ಸೈಬರ್ ದಾಳಿ ನಡೆಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಚೀನಾ ಸರ್ಕಾರ ಜೊತೆ ಸಂಬಂಧ ಹೊಂದಿರುವ ಹ್ಯಾಕರ್ ಗುಂಪು, ಕಂಪ್ಯೂಟರ್ ಮತ್ತು ಮೊಬೈಲ್‍ನಲ್ಲಿ ಬಳಸುವ ವಿಎಲ್‍ಸಿ ಮೀಡಿಯಾ ಪ್ಲೇಯರ್ ಮೂಲಕ ಸೈಬರ್ ದಾಳಿ ಮಾಡಲು ಮುಂದಾಗುತ್ತಿದೆ ಎಂದು ಸೈಬರ್ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ:  ನಾನು ಇದೇ ಏರಿಯಾದವನು ಏನ್ ಮಾಡ್ತಿಯಾ? – ಚಂದ್ರು ಕೊಲೆ ದಿನ ನಡೆದಿದ್ದು ಏನು?

A large monitor displaying a security hacking breach warning.

ಈ ಚಟುವಟಿಕೆಗಳನ್ನು ಸಿಕಾಡಾ ಎಂಬ ಹ್ಯಾಕರ್ ಗುಂಪು ಮಾಡುತ್ತಿದೆ ಎಂದು ವರದಿಯಾಗಿದೆ. 2006ರಿಂದ ಸಿಕಾಡಾ ಕಾರ್ಯನಿರ್ವಹಿಸುತ್ತಿದೆ.

ತಜ್ಞರು ಹೇಳುವುದೇನು?
ಚೀನಾ ಸರ್ಕಾರದ ಬೆಂಬಲಿತ ಸಿಕಾಡಾ ಹ್ಯಾಕರ್‍ಗಳು, ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಮಾಲ್‍ವೇರ್‍ಗಳನ್ನು ರವಾಸಿಸುತ್ತಿದ್ದಾರೆ. ಈ ಮಾಲ್‍ವೇರ್ ಸಿಸ್ಟಮ್‍ನಲ್ಲಿರುವ ಎಲ್ಲ ಮಾಹಿತಿಯನ್ನು ಕಲೆಹಾಕುತ್ತದೆ. ಅಲ್ಲದೇ ಚಾಲನೆಯಲ್ಲಿರುವ ಪ್ರಕ್ರಿಯೆಗಳು, ಡೌನ್ಲೋಡ್ ಮಾಡಿದ ಮಾಹಿತಿಗಳನ್ನು ಕದ್ದು, ಹ್ಯಾಕರ್‍ಗಳಿಗೆ ರವಾನಿಸುತ್ತಿವೆ ಎಂದು ತಜ್ಞರು ಮಾಹಿತಿಯನ್ನು ಕೊಟ್ಟಿದ್ದಾರೆ.

VLC Media Player.

ಭಾರತ, ಅಮೆರಿಕಾ, ಕೆನಡಾ, ಹಾಂಕಾಂಗ್, ಟರ್ಕಿ, ಇಸ್ರೇಲ್, ಇಟಲಿ ಮಾದಲಾದ ದೇಶಗಳಲ್ಲಿ ಸಿಕಾಡಾ ಸೈಬರ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಸಿಕಾಡಾ 3 ಖಂಡಗಳ ಸರ್ಕಾರವನ್ನು ಗುರಿಯಲ್ಲಿ ಇಟ್ಟುಕೊಂಡು ಆ ರಾಷ್ಟ್ರಗಳ ದೂರಸಂಪರ್ಕ ಹಾಗೂ ಕಾನೂನಾತ್ಮಕ ಸಂಸ್ಥೆಗಳ ಮಾಹಿತಿಯನ್ನು ಕಲೆಯಾಕುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮಾಲ್‍ವೇರ್ ಎಂದರೇನು?
ಮಾಲ್‍ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನಿನ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

 

 

Comments

Leave a Reply

Your email address will not be published. Required fields are marked *