ನಮ್ಮ ರಚನಾತ್ಮಕ ಸಲಹೆಗಳನ್ನು ಚೀನಾ ಒಪ್ಪಿಲ್ಲ: ಭಾರತೀಯ ಸೇನೆ

ನವದೆಹಲಿ: ಪೂರ್ವ ಲಡಾಕ್ ಗಡಿ ಪ್ರದೇಶಗಳಲ್ಲಿನ ಸಂಘರ್ಷಗಳಿಗೆ ತೆರೆ ಎಳೆಯುವ ಸಂಬಂಧ ಭಾರತೀಯ ಸೇನೆ ನೀಡಿದ ರಚನಾತ್ಮಕ ಸಲಹೆಗಳನ್ನು ಚೀನಾ ಪರಿಗಣಿಸಲು ಸಿದ್ಧವಿಲ್ಲ ಎಂದು ಭಾರತೀಯ ಸೇನೆ ಹೇಳಿದೆ. 13 ನೇ ಕಾರ್ಫ್ಸ್ ಕಮಾಂಡರ್ ಮಟ್ಟದ ಸಭೆಯ ಬಳಿಕ ಭಾರತೀಯ ಸೇನೆ ಇಂತದೊಂದು ಮಹತ್ವದ ಪ್ರತಿಕ್ರಿಯೆ ನೀಡಿದೆ.

ಚೀನಾ ಮತ್ತು ಭಾರತದ ನಡುವೆ ಏರ್ಪಟ್ಟಿರುವ ಸಂಘರ್ಷ ಇತ್ಯರ್ಥಕ್ಕಾಗಿ ಭಾನುವಾರ 13 ನೇ ಕಾರ್ಫ್ಸ್ ಕಮಾಂಡರ್ ಮಟ್ಟದ ಸಭೆಯನ್ನು ಏರ್ಪಡಿಸಲಾಗಿತ್ತು. ಮೊಲ್ಡೊದಲ್ಲಿ ನಡೆದ ಸಭೆಯಲ್ಲಿ ಉಭಯ ಸೇನಾ ಪ್ರತಿನಿಧಿಗಳು ಸುಧೀರ್ಘ ಎಂಟು ಗಂಟೆಗಳ ಕಾಲ ಚರ್ಚಿಸಿದರು. ಸಭೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಒಪ್ಪದ ಚೀನಾ ಸದ್ಯ ಯಥಾಸ್ಥಿತಿ ಮುಂದುವರಿಸುವುದಾಗಿ, ಹಿಂದಿನ ಮಾತುಕತೆಗೆ ಬದ್ಧವಿರುವುದಾಗಿ ಹೇಳಿದೆ ಎಂದು ಭಾರತೀಯ ಸೇನೆ ಹೇಳಿದೆ.

ಈ ಬಾರಿಯ ಸಭೆಯಲ್ಲಿ ಚೀನಾ ಸೇನೆಯನ್ನು ಮತ್ತಷ್ಟು ಹಿಂದೆ ಸರಿಸುವ ಲೆಕ್ಕಚಾರದಲ್ಲಿ ಭಾರತೀಯ ಸೇನೆ ಇತ್ತು. ಜುಲೈ 31 ರಂದು ಮಡೆದ 12ನೇ ಸಭೆಯಲ್ಲಿ ಚೀನಾ ತನ್ನ ಸೇನೆಯನ್ನು ಹಿಂದೆ ಪಡೆಯಲು ಒಪ್ಪಿಕೊಂಡಿತ್ತು. ಹಾಟ್ ಸ್ಪ್ರಿಂಗ್ಸ್, ಪಿಪಿ 15 ನಿಂದ ಸಂಪೂರ್ಣ ಸೇನೆ ಬೇರ್ಪಡುವಿಕೆಯ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಭಾರತೀಯ ಸೇನೆ ಇತ್ತು. ಆದರೆ ಚೀನಾದ ದ್ವಿಮುಖ ನೀತಿಗಳಿಂದ ಅದು ಸಾಧ್ಯವಾಗಲಿಲ್ಲ.

ಸಭೆಯಲ್ಲಿ ಚೀನಾ ತನ್ನ ಐದು ಗಸ್ತು ಪಾಯಿಂಟ್‍ಗಳಾದ ಪಿಪಿ 10, ಪಿಪಿ 11, ಪಿಪಿ 11 ಎ, ಪಿಪಿ 12 ಮತ್ತು ಪಿಪಿ 13 ಪ್ರವೇಶಿಸದಂತೆ ಭಾರತವನ್ನು ನಿರ್ಬಂಧಿಸುತ್ತಿದೆ. ಚೀನಾದ ನಾಗರಿಕರು ಎಂದು ಕರೆದುಕೊಳ್ಳುವ ಕೆಲವರು ಡೆಮ್‍ಚಾಕ್‍ನಲ್ಲಿ ಚಾರ್ಲಿಂಗ್ ನಾಲಾದ ಭಾರತೀಯ ಭಾಗದಲ್ಲಿ ಡೇರೆಗಳನ್ನು ಹಾಕಿದ್ದಾರೆ ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯ್ತು. ಇದನ್ನೂ ಓದಿ: ಕೋವಿಡ್ ಲಸಿಕೆಗೆ ನೊಬೆಲ್ ಪ್ರಶಸ್ತಿ ಮಿಸ್ – ರಹಸ್ಯ ಬೆಳಕಿಗೆ

ಭಾರತ ಚೀನಾ ನಡುವಿನ ಮಾತುಕತೆ ನಡುವೆ ಚೀನಾದ ಅತಿಕ್ರಮಣ ಪ್ರಯತ್ನಗಳು ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ತವಾಂಗ್‍ನಲ್ಲಿ ಭಾರತೀಯ ಮತ್ತು ಚೀನಾದ ಗಸ್ತು ಸೈನಿಕರು ಮುಖಾಮುಖಿಯಾಗಿದ್ದರು, ಆಗಸ್ಟ್ ಅಂತ್ಯದಲ್ಲಿ ಉತ್ತರಾಖಂಡದ ಬಾರಹೋಟಿಯಲ್ಲಿ ಚೀನಾದ ಸೈನ್ಯವು ಎಲ್‍ಎಸಿಯನ್ನು ದಾಟಿತ್ತು. ಈ ಎಲ್ಲ ಪ್ರಕರಣಗಳ ಬಳಿಕ ಲಡಾಕ್‍ಗೆ ಭೇಟಿ ನೀಡಿದ್ದ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವನೆ ವಿವಾದಿತ ಪ್ರದೇಶದಲ್ಲಿ ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಅದು ಅಲ್ಲಿ ಉಳಿಯಲು ಬಯಸಿದ್ದರೇ ನಾವು ಉಳಿಯಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.

Comments

Leave a Reply

Your email address will not be published. Required fields are marked *