ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

ಬಿಜೀಂಗ್: ಹಾಲಿವುಡ್ ನ ಸ್ಟಾರ್ ವಾರ್ಸ್ ಸಿನಿಮಾ ಶ್ರೇಣಿಯಲ್ಲಿ ಕಾಣಿಸಿಕೊಂಡಿರುವ ಕಾಲ್ಪಿನಿಕ ಗನ್ ಗೆ ಚೀನಾ ನೈಜ ರೂಪು ನೀಡಲು ಸಿದ್ಧತೆ ನಡೆಸಿದ್ದು, ಸುಮಾರು ಒಂದು ಕಿಮೀ ದೂರದ ಟಾರ್ಗೆಟ್ ಅನ್ನು ಹೊಡೆದುರುಳಿಸಬಲ್ಲ ಸುಧಾರಿತ ಗನ್ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ.

ಮಾನವ ದೇಹಕ್ಕೆ ಅತ್ಯಂತ ಮಾರಣಾಂತಿಕ ಲೇಸರ್ ಕಿರಣವನ್ನು ಬಳಸಿಕೊಂಡು ಗನ್ ಅಭಿವೃದ್ಧಿ ಪಡಿಸುತ್ತಿದೆ. ಈ ಕುರಿತು ಸೌತ್ ಚೈನಾ ಮಾರ್ನಿಂಗ್ ಪತ್ರಿಕೆ ವರದಿ ಮಾಡಿದ್ದು, ಝಡ್‍ಕೆಝೆಎಂ-500 ಹೆಸರಿನ ಗನ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸದ್ಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸುತ್ತಿರುವ ಗನ್ 3 ಕೆಜಿ ತೂಕ ಹೊಂದಿರಲಿದ್ದು, ಎಕೆ47 ಗನ್ ಮಾದರಿಯನ್ನು ಹೊಂದಿರುತ್ತದೆ. ಗನ್ ಸಾಮಥ್ರ್ಯ ಬರಿ ಕಣ್ಣಿಗೆ ಕಾಣದಷ್ಟು ಶಕ್ತಿಯನ್ನು ಹೊಂದಿರಲಿದ್ದು, ಎದುರಾಳಿ ದೇಹದ ಸೀಳುವಂತಹ ಶಕ್ತಿಯನ್ನು ಹೊಂದಿರುತ್ತದೆ. ಗನ್ ರಿಚಾರ್ಜ್ ಮಾಡಲು ಲಿಥಿಯಂ ಬ್ಯಾಟರಿ ಪವರ್ ಕೂಡ ನೀಡಲಾಗುತ್ತಿದ್ದು, 2 ಸೆಕೆಂಡ್ ಗೆ 1 ಸಾವಿರದಷ್ಟು ಲೇಸರ್ ಕಿರಣಗಳನ್ನು ಉಗುಳುವ ಸಾಮಥ್ರ್ಯ ಹೊಂದಿರುತ್ತದೆ. ಅಲ್ಲದೇ ಇದನ್ನು ಕಾರು, ಬೋಟ್ ಮತ್ತು ವಿಮಾನಗಳಲ್ಲಿ ಅಳವಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ.

ಸದ್ಯ ಈ ಗನ್ ಗಳನ್ನು ಅಭಿವೃದ್ಧಿ ಪಡಿಸಿದ ಬಳಿಕ ಭಯೋತ್ಪಾದನ ಚಟುವಟಿಕೆ ನಡೆಸುವವರ ವಿರುದ್ಧ ಬಳಕೆ ಮಾಡಲು ಚೀನಾ ನಿರ್ಧರಿಸಿದ್ದು, ಗನ್ ಗಳ ಮೊದಲ ಸರಣಿಯನ್ನು ಬಿಡುಗಡೆಗೆ ಸಿದ್ಧಪಡಿಸಲಾಗುತ್ತಿದೆ. ಒಂದೊಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಚೀನಾ ಅಗಾಧ ಪ್ರಮಾಣದ ಲಾಭ ಪಡೆಯಬಹುದಾಗಿದೆ. ಸದ್ಯ ಒಂದು ಗನ್‍ಬೆಲೆ 10 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

Comments

Leave a Reply

Your email address will not be published. Required fields are marked *