ಕೊಪ್ಪಳದಲ್ಲಿ ಮಕ್ಕಳ ಆಸ್ಪತ್ರೆಗಳು ಬಹುತೇಕ ಫುಲ್

ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮೂರನೇ ಅಲೆಗೂ ಮುನ್ನವೇ ಜಿಲ್ಲೆಯಲ್ಲಿ ಮಕ್ಕಳ ಆಸ್ಪತ್ರೆಗಳು ಬಹುತೇಕ ಫುಲ್ ಆಗಿವೆ. ಈಗಾಗಲೇ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂಬ ಬೋರ್ಡ್ ನೇತಾಡುತ್ತಿವೆ. ವೈರಲ್ ನ್ಯುಮೊನಿಯಾ ಕಾಯಿಲೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿನ ಮಕ್ಕಳ ವಾರ್ಡ್, ಎನ್‍ಆರ್ ಸಿ ವಾರ್ಡ್ ಹಾಗೂ ನವಜಾತ ಶಿಶುಗಳ ವಾರ್ಡಿನಲ್ಲಿ ಬಹುತೇಕ ಫುಲ್ ಆಗಿವೆ. ಮಕ್ಕಳ ವಾರ್ಡಿನಲ್ಲಿ 32, ಎನ್ ಆರ್ ಸಿ 6 ಹಾಗೂ ನವಜಾತ ಶಿಶುಗಳ ವಾರ್ಡಿನಲ್ಲಿ 27 ಮಕ್ಕಳು ದಾಖಲಾಗಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ

ಕೊಪ್ಪಳ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿಯೂ ನೋ ಬೆಡ್ ಎಂಬ ಬೋರ್ಡ್ ನೇತಾಡುತ್ತಿವೆ. ಮಕ್ಕಳು ನೆಗಡಿ, ಕೆಮ್ಮು, ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸಮಾಧಾನಕರ ಸಂಗತಿ ಎಂದರೆ ಕೊವಿಡ್ ಟೆಸ್ಟ್ ಮಾಡಿಸಿದಾಗ ಮಕ್ಕಳಲ್ಲಿ ಪಾಸಿಟಿವ್ ಬಂದಿಲ್ಲ. ವೈರಲ್ ನ್ಯುಮೊನಿಯಾಕ್ಕೆ ತುತ್ತಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಮಕ್ಕಳಲ್ಲಿ ವಿಪರೀತ ಜ್ವರ ಕಾಣಿಸಿಕೊಳ್ಳುತ್ತಿದೆ. ಒಂದು ವಾರ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ವೈರಲ್ ನ್ಯುಮೋನಿಯಾ ಕಾಣಿಸಿಕೊಳ್ಳಲು ಮುಖ್ಯ ಕಾರಣ ಈ ವರ್ಷ ಅಧಿಕ ಮಳೆಯಾಗಿರುವುದು. ಮಳೆಯಿಂದಾಗಿ ಮಕ್ಕಳಲ್ಲಿ ಶೀತ ಕಾಣಿಸಿಕೊಳ್ಳುತ್ತಿದೆ, ಲಾಕ್‍ಡೌನ್ ನಂತರ ಮಕ್ಕಳು ಹೊರಗಡೆ ಮಣ್ಣಿನಲ್ಲಿ ಆಟವಾಡುತ್ತಿದ್ದಾರೆ. ಬೀದಿ ಬದಿಯ ತಿಂಡಿಯನ್ನು ಸೇವಿಸುತ್ತಿದ್ದಾರೆ. ಇದರಿಂದಾಗಿ ವೈರಲ್ ನ್ಯೂಮೋನಿಯಾ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ವೈದ್ಯರು.

ವೈರಲ್ ನ್ಯೂಮೋನಿಯಾದಿಂದ ದೂರವಿರಲು ಮಕ್ಕಳು ಸಾಧ್ಯವಾದಷ್ಟು ಮನೆಯಲ್ಲೇ ಬೆಚ್ಚಗಿರುವಂತೆ, ಹೊರಗಡೆ ಮಣ್ಣಿನಲ್ಲಿ ಆಟವಾಡದಂತೆ ಹಾಗೂ ಹೊರಗಡೆ ತಿಂಡಿಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು, ಭಯ ಪಡುವ ಅವಶ್ಯಕತೆ ಇಲ್ಲ ಎಂದು ಮಕ್ಕಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *