ಮಗನಿಗಾಗಿ ದುಬಾರಿ ಗಿಫ್ಟ್ ನೀಡಿದ ಸೈಫ್ ಅಲಿ ಖಾನ್: ಜೀಪಿನ ಬೆಲೆ ಎಷ್ಟು ಗೊತ್ತಾ?

ಮುಂಬೈ: ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕರು ತಮ್ಮ ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿಯ ಮಕ್ಕಳ ದಿನಾಚರಣೆಯಂದು ಸೈಫ್ ಅಲಿ ಖಾನ್ ಮತ್ತು ಕರೀನ ಕಪೂರ್ ದಂಪತಿ ತಮ್ಮ ಮಗನಿಗೆ ವಿಶೇಷವಾದ ಉಡುಗೊರೆಯನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸೋಮವಾರ ಸೈಫ್ ಅಲಿ ಖಾನ್ ತಮ್ಮ ಮುದ್ದಿನ ಮಗನಾದ ತೈಮೂರ್ ಗೆ ಬರೋಬ್ಬರಿ 1.30 ಕೋಟಿ ರೂ. ವೆಚ್ಚದ ಉಡುಗೊರೆಯನ್ನು ನೀಡಿದ್ದಾರೆ. ಕೆಂಪು ಬಣ್ಣದ `swanky Jeep Grand Cherokee SRT’ ಕಾರನ್ನು ಖರೀದಿಸಿದ್ದಾರೆ. ತೈಮೂರ್ ಗೆ ಇದೇ ಮೊದಲ ಉಡುಗೊರೆಯಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಕ್ಕಳ ಸುರಕ್ಷತೆ ತುಂಬಾ ಮುಖ್ಯ ಈ ಜೀಪ್ ತುಂಬಾ ಸುರಕ್ಷತೆಯಿಂದ ಕೂಡಿದೆ. ಹಿಂಬದಿಯಲ್ಲಿ ಮಗುವಿಗಾಗಿ ಬೇಬಿ ನೀಟ್ ಇದೆ. ತೈಮೂರ್ ಜೊತೆ ಮೊದಲ ಡ್ರೈವ್ ಹೋಗಲು ಕಾತುರದಿಂದ ಇದ್ದೇನೆ ಎಂದು ಸಂತೋಷದಿಂದ ಹೇಳಿದರು.

ಮಾತನ್ನು ಮುಂದುವರಿಸಿ ತೈಮೂರ್ ಕೆಂಪು ಬಣ್ಣವನ್ನು ಇಷ್ಟ ಪಡುತ್ತಾನೆ. ಆದ್ದರಿಂದ ಈ ಕಾರನ್ನು ಇಷ್ಟ ಪಡುತ್ತಾನೆ ಎಂದು ತಿಳಿಸಿದರು. ಇನ್ನು ಡಿಸೆಂಬರ್ ನಲ್ಲಿ ತೈಮೂರ್ ಹುಟ್ಟುಹಬ್ಬವಿದ್ದು, ಮೊದಲನೇ ವರ್ಷದ ಹುಟ್ಟುಹಬ್ಬಕ್ಕೆ ಮುಂಚೆಯೇ ತಮ್ಮ ಮಗನಿಗೆ ದುಬಾರಿ ಗಿಫ್ಟ್ ನೀಡಿರುವುದು ಬಾಲಿವುಡ್ ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

 

 

Comments

Leave a Reply

Your email address will not be published. Required fields are marked *