ದಾವಣಗೆರೆ: ತನ್ನ ಮಗು ಸಾವನ್ನಪ್ಪಿದ್ದಕ್ಕೆ ಮನನೊಂದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಧಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಜಿಲ್ಲೆಯ ಹರಿಹರ ತಾಲೂಕಿನ ಗುಡ್ಡದ ಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಒಂದು ವರ್ಷದ ಮಗಳನ್ನು ಕಳೆದುಕೊಂಡ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಯೋತಿ(28) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ತಾಯಿ.

ಮಂಜುನಾಥ್ ಹಾಗೂ ಜ್ಯೋತಿ ಸುಖವಾದ ಸಂಸಾರ ನಡೆಸುತ್ತಿದ್ದರು. ಒಂದು ವರ್ಷದ ಹೆಣ್ಣು ಮಗು ವಂದನ ಜೊತೆ ಸಂತೋಷವಾಗಿದ್ದರು. ಆದರೆ ಅನಾರೋಗ್ಯದಿಂದ ಮೂರು ತಿಂಗಳ ಹಿಂದೆ ಮಗು ಸಾವನ್ನಪ್ಪಿತ್ತು. ಸಾಕಷ್ಟು ಪ್ರೀತಿಯಿಂದ ನೋಡಿಕೊಂಡಿದ್ದ ಮಗು ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ತಾಯಿ ನೊಂದಿದ್ದರು. ಇದೇ ಕೊರಗಿನಲ್ಲಿ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಲೆಬೆನ್ನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply