9 ವರ್ಷದ ಬಾಲಕಿಯ ಮೇಲೆ ಕುಳಿತ 150 ಕೆಜಿ ತೂಕದ ಮಹಿಳೆ: ಕ್ರೂರ ಶಿಕ್ಷೆಗೆ ಮಗು ಸಾವು

ಫ್ಲೋರಿಡಾ: 9 ವರ್ಷದ ಬಾಲಕಿ ಮೇಲೆ 150 ಕೆ.ಜಿ. ತೂಕದ ಮಹಿಳೆ ಕುಳಿತ ಪರಿಣಾಮವಾಗಿ ಬಾಲಕಿ ಮೃತಪಟ್ಟಿರುವ ಧಾರುಣ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

ಪ್ಲೋರಿಡಾ ನಗರದ ಪೆನ್ನಕೋಲಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಡೆರಿಕ್ಕಾ ಲಿಂಡ್ಸೆ ಎಂಬ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಈ ನರಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೆರೋನಿಕಾ ಗ್ರೀನ್ ಪೋಸ್ಸಿ(64) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಲಿಂಡ್ಸೆ ಹೆಚ್ಚು ಗಲಾಟೆ ಮಾಡಿದ್ದಕ್ಕೆ 150 ಕೆಜಿ ತೂಕದ ಸೋದರ ಸಂಬಂಧಿ ವೆರೋನಿಕಾ ಪೋಸ್ಸಿ ಆಕೆಯ ಮೇಲೆ ಕುಳಿತ್ತಿದ್ದಾಳೆ. 12 ನಿಮಿಷಗಳ ಕಾಲ ಕುಳಿತ ಪರಿಣಾಮ ಲಿಂಡ್ಸೆ ಮೂರ್ಛೆ ಹೋಗಿದ್ದನ್ನು ತಿಳಿದ ವೆರೋನಿಕಾ ತಕ್ಷಣ ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ, ಬಾಲಕಿಗೆ ಹೃದಯಘಾತವಾಗಿದೆ ಎಂದು ಹೇಳಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ.

ಮೃತಪಡುವ ಮೊದಲು ಲಿಂಡ್ಸೆ ತನ್ನ ತನ್ನ ಮೇಲೆ ವೆರೋನಿಕಾ ಕುಳಿತ್ತಿದ್ದಳು. ಇದರಿಂದಾಗಿ ನನಗೆ ಉಸಿರಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾಳೆ. ಈ ಹೇಳಿಕೆಯ ಆಧಾರದಲ್ಲಿ ವೆರೋನಿಕಾಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಳಿತಿದ್ದು ಯಾಕೆ?
ಎಷ್ಟು ಹೇಳಿದರೂ ಲಿಂಡ್ಸ್ ಗಲಾಟೆ ಮಾಡುತ್ತಿದ್ದಳು. ಹೀಗಾಗಿ ನನಗೆ ಸಿಟ್ಟು ತಡೆಯಲಾರದೇ ಆಕೆಯ ಮೇಲೆ ಕುಳಿತೆ ಎಂದು ವೆರೋನಿಕಾ ಗ್ರೀನ್ ಪೋಸ್ಸಿ ನ್ಯಾಯಾಲಯದ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಕೃತ್ಯಕ್ಕೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಗ್ರೇಸ್ ಜೋನ್ ಸ್ಮಿತ್(69) ಮತ್ತು ಜೇಮ್ಸ್ ಎಡ್ಮಂಡ್ ಸ್ಮಿತ್(62) ಎಂಬುವರನ್ನು ಬಂಧಿಸಲಾಗಿದೆ.

 

 

Comments

Leave a Reply

Your email address will not be published. Required fields are marked *