ಬೆಂಗಳೂರು: ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜಪೇಟೆ (Chamrajpet) ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರದಲ್ಲಿ (Azad Nagar) ನಡೆದಿದೆ.
ನಗರದ 6ನೇ ಕ್ರಾಸ್‍ನ ವಿನಯ್ ಎಂಬುವವರ ಪುತ್ರಿ ದೀಕ್ಷಾ ಮೃತಪಟ್ಟ ಮಗು. ರಾತ್ರಿ 9 ಗಂಟೆಗೆ ಮಗುವಿಗೆ ತಾಯಿ ಊಟ ಮಾಡಿಸುತ್ತಿದ್ದಾಗ ಆಟವಾಡುತ್ತ ಗ್ರಿಲ್ (Grill) ಮೇಲೆ ಹತ್ತಿದೆ. ಕ್ಷಣಾರ್ಧದಲ್ಲಿ ನೋಡು ನೋಡುತ್ತಿದ್ದಂತೆ ಮಗು ಜಾರಿ ಕೆಳಗೆ ಬಿದ್ದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.
ಕಳೆದ ವಾರ ಕೆಂಗೇರಿಯಲ್ಲಿ (Kengeri) ಇದೇ ರೀತಿ ಘಟನೆ ನಡೆದು ಮಗುವೊಂದು ಮೃತಪಟ್ಟಿತ್ತು. ಇದನ್ನೂ ಓದಿ: ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

Leave a Reply