ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

ಮುಂಬೈ: ಗುಲಾಬ್ ಜಾಮೂನ್ ತಯಾರಿಸಿಟ್ಟಿದ್ದ ಪಾತ್ರೆಗೆ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಎರಡು ವರ್ಷದ ರಾಜವೀರ್ ನಿತಿನ್ ಮೇಘವಾಲೆ ಗುಲಾಬ್ ಜಾಮೂನು ಪಾತ್ರೆಯಲ್ಲಿ ಬಿದ್ದು ಮೃತಪಟ್ಟ ಮಗುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮನೆಯವರು ಮಹಾಪ್ರಸಾದವಾಗಿ ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಿ, ದೊಡ್ಡದಾದ ಪಾತ್ರೆಯಲ್ಲಿ ಸಂಗ್ರಹಿಸಿದ್ದರು.

ಇದರ ಅರಿವಿಲ್ಲದ ರಾಜವೀರ್ ಆಟವಾಡುತ್ತಾ ಹೋಗಿ ಬಿಸಿ ಜಾಮೂನು ಪಾತ್ರೆಯಲ್ಲಿ ಬಿದ್ದಿದ್ದಾನೆ. ತಕ್ಷಣಕ್ಕೆ ಮಗುವನ್ನು ಯಾರೂ ಗಮನಿಸಿರಲಿಲ್ಲ. ಮಗು ಕಿರುಚಾಡಿದ್ದನ್ನು ಕೇಳಿ, ಪೋಷಕರು ಮಗುವನ್ನು ಪಾತ್ರೆಯಿಂದ ಎತ್ತಿದ್ದಾರೆ. ಆದರೆ ಬಿಸಿ ಜಾಮೂನಿನಲ್ಲಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದವು. ಕೂಡಲೇ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಜವೀರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *