ಕೇಸರಿ ಚಪ್ಪಲಿ ಬೇಕಾದರೂ ಧರಿಸಲಿ, ನಮ್ಗೆ ಹಿಜಬ್‍ಗೆ ಅನುಮತಿ ನೀಡಿ – ಗೋಕಾಕ್ ವಿದ್ಯಾರ್ಥಿನಿಯರು

ಚಿಕ್ಕೋಡಿ: ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ, ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಗೋಕಾಕ್ ಪಟ್ಟಣದಲ್ಲಿ ಪಿಯು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನ ಬಹಿಷ್ಕರಿಸಿದ್ದಾರೆ.

ಕಾಲೇಜುಗಳಲ್ಲಿ ಬೇರೆ ಕೋಮಿನ ವಿದ್ಯಾರ್ಥಿಗಳು ಕೇಸರಿ ಚಪ್ಪಲಿ ಬೇಕಾದರೂ ಧರಿಸಿ ಬರಲಿ ನಮಗೆನೂ ಅಭ್ಯಂತರವಿಲ್ಲ. ನಮಗೆ ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಹಿಜಬ್ ಬೆಂಬಲಿತ ವಿದ್ಯಾರ್ಥನಿಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಲ್ಲಿ ಹಿಜಬ್ ವಿವಾದ ಮುಂದುವರೆದಿದ್ದು, ತರಗತಿಗಳಿಗೆ ತೆರಳದೆ ಶಾಲೆಯ ಗೇಟ್ ಹೊರಗಡೆ ನಿಂತು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಆಗಿ ರೋಹಿತ್‌ ಶರ್ಮಾ ನೇಮಕ

ಗೋಕಾಕ್ ಪಟ್ಟಣದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥನಿಯರು ಹಿಜಬ್ ಧರಿಸಿ ತರಗತಿಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದು, ಹಿಂದೂ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಧರಿಸಲಿ, ಕೇಸರಿ ಚಪ್ಪಲಿ ಧರಿಸಲಿ, ಕೇಶಗಳನ್ನ ಕೇಸರಿ ಮಾಡಿಕೊಂಡು ಬರಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ನಮಗೆ ಹಿಜಬ್ ಬೇಕು, ನಾವು ಧರ್ಮ ಮತ್ತು ಹಿಜಬ್ ಬಿಡುವ ಪ್ರಶ್ನೆಯೇ ಇಲ್ಲ. ಪರೀಕ್ಷೆಗಳನ್ನು ಬಿಡುತ್ತೇವೆ ಆದರೆ ಹಿಜಬ್ ಬಿಡುವದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ತರಗತಿಗಳನ್ನ ಬಹಿಷ್ಕರಿಸಿದ್ದಾರೆ.

Comments

Leave a Reply

Your email address will not be published. Required fields are marked *