ಅನೈತಿಕ ಸಂಬಂಧ ಮುಚ್ಚಿಡಲು ಮಗ, ಅತ್ತಿಗೆಯನ್ನೇ ಕೊಲೆಗೈದ್ಳು

ಚಿಕ್ಕೋಡಿ(ಬೆಳಗಾವಿ): ತನ್ನ ಅನೈತಿಕ ಸಂಬಂಧವನ್ನು ಮುಚ್ಚಿಡಲು ಮಹಿಳೆಯೊಬ್ಬಳು ತನ್ನ ಹೆತ್ತ ಮಗ ಹಾಗೂ ಅತ್ತಿಗೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.

ಮೃತ ಮಗನನ್ನು ಪ್ರವೀಣ್ ಹಾಗೂ ಅತ್ತಿಗೆಯನ್ನು ಭಾಗ್ಯಶ್ರೀ ಎಂದು ಗುರುತಿಸಲಾಗಿದೆ. ಮಗನನ್ನು ಬಾವಿಗೆ ತಳ್ಳಿ ಆರೋಪಿ ಸುಧಾ ಕೊಲೆ ಮಾಡಿದ್ರೆ, ಅತ್ತಿಗೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾಳೆ.

ಏನಿದು ಪ್ರಕರಣ:
ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರೀಗಾರ ಮತ್ತು ರಮೇಶ್ ಬಸ್ತವಾಡೆ ನಡುವೆ ಸರಸ ಸಲ್ಲಾಪ ನಡೆದಿತ್ತು. ಇವರಿಬ್ಬರೂ ಮೊಬೈಲ್ ನಲ್ಲಿ ಮಾತಾಡುವುದನ್ನು ಸುಧಾಳ ಗಂಡನ ಅಣ್ಣನ ಹೆಂಡತಿ ಭಾಗ್ಯಶ್ರೀ ಕೇಳಿಸಿಕೊಂಡು ತನ್ನ ಗಂಡನಿಗೆ ತಿಳಿಸಿದ್ದಾಳೆ. ಅಲ್ಲದೆ ತಮ್ಮನ ಹೆಂಡತಿಗೆ ಬುದ್ಧಿ ಮಾತು ಹೇಳುವಂತೆಯೂ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾಗ್ಯಶ್ರೀಯ ಗಂಡ ಚಿನ್ನಪ್ಪ, ತನ್ನ ತಮ್ಮನ ಹೆಂಡತಿ ಅಂದರೆ ಸುರೇಶ್ ಕರೀಗಾರ ಹೆಂಡತಿ ಸುಧಾಗೆ ಬುದ್ಧಿ ಹೇಳಿದ್ದಾರೆ ತನ್ನ ಅನೈತಿಕ ಸಂಬಂಧದ ಬಗ್ಗೆ ಭಾಗ್ಯಶ್ರೀ ಎಡವಟ್ಟು ಮಾಡಿದ್ದಾಳೆ. ಅವಳು ಗಂಡನ ಎದುರು ಬಾಯಿಬಿಟ್ಟರೆ ನನ್ನ ಬದುಕು ಬುಡಮೇಲಾದೀತು ಎಂಬ ಭಯದಿಂದ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಸುಧಾ ಪ್ಲಾನ್ ಮಾಡಿ, ಭಾಗ್ಯಶ್ರೀ ಮಲಗಿರುವಾಗ ಸುಧಾ ಸಮಯ ಸಾಧಿಸಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ.

ಇತ್ತ ರಮೇಶ್ ಬಸ್ತವಾಡೆ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿರುವ ವಿಷಯ ಸುಧಾಳ ಮಗ ಪ್ರವೀಣಗೂ ಗೊತ್ತಾಗಿದೆ. ಈ ವಿಚಾರ ತಿಳಿದ ಸುಧಾ, ಮಗ ಪ್ರವೀಣನನ್ನು ಬಾವಿ ಹತ್ತಿರ ಕರೆದುಕೊಂಡು ಹೋಗಿ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ.

ಸುಧಾ ಕರೀಗಾರ ಗಂಡನ ಅಣ್ಣ ಚಿನ್ನಪ್ಪ ಕರೀಗಾರ ಕೊಟ್ಟ ದೂರು ದಾಖಲಿಸಿಕೊಂಡ ಪೋಲೀಸರು ಮೊದಲು ಇದನ್ನು ಸಹಜ ಸಾವು ಎಂದು ತಿಳಿದುಕೊಂಡಿದ್ದರು. ಬಳಿಕ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಹಾಗೂ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಅವರು ತನಿಖೆ ನಡೆಸಿ ಪ್ರಕರಣದ ಬೆನ್ನು ಹತ್ತಿದ್ದಾರೆ. ಹೀಗಾಗಿ ಜೋಡಿ ಕೊಲೆ ಮಾಡಿದ ಸುಧಾ ಕರೀಗಾರ ಮತ್ತು ರಮೇಶ್ ಬಸ್ತವಾಡೆ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಕೊಲೆ ಮಾಡಿರುವ ಸುಧಾ ಹಾಗೂ ಆತನ ಪ್ರಿಯಕರ ರಮೇಶ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *