ನಾನು ರಿವೇಂಜ್ ತೆಗೆದುಕೊಳ್ಳಲ್ಲ, ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ: ಹೆಚ್‍ಡಿಕೆ

– ಮನಸ್ಸು ತಡೆಯದೆ ಸಂತ್ರಸ್ತರ ಭೇಟಿ

ಚಿಕ್ಕೋಡಿ: ನಾನು ರಿವೇಂಜ್ ತೆಗೆದುಕೊಳ್ಳಲ್ಲ. ಜೊತೆಗೆ ಬಿಜೆಪಿ ಸರ್ಕಾರವನ್ನೂ ಬೀಳಿಸುವುದಿಲ್ಲ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಬಿಜೆಪಿ ಪಕ್ಷದ ಮೇಲೆ ಸಾಫ್ಟ್ ಕರ್ನಾರ್ ತೋರಿದ್ದಾರೆ.

ಇಂದು ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ವಿರುದ್ಧ ನಾನು ರಿವೇಂಜ್ ತೆಗೆದುಕೊಳ್ಳಲ್ಲ. ನನ್ನ ಮೈತ್ರಿ ಸರ್ಕಾರವನ್ನು ಅವರು ಕೆಡೆವಿದರು ಎಂದು ಬಿಜೆಪಿ ಸರ್ಕಾರವನ್ನು ನಾನು ಬೀಳಿಸುವುದಿಲ್ಲ ಎಂದು ತಿಳಿಸಿದರು.

ಸರ್ಕಾರದ ಗಮನವನ್ನು ನಾನು ಮೊದಲು ಸೆಳೆಯುತ್ತೇನೆ. ಕೆಲಸ ಆಗಲಿಲ್ಲ ಎಂದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು. ಇದೇ ವೇಳೆ ಸರ್ಕಾರಿ ಐಬಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಬಂದಿರುವುದು ಯಾವುದೇ ಪಕ್ಷದ ಸಂಘಟನೆಯ ಕಾರ್ಯಕ್ರಮಕ್ಕಲ್ಲ. ಕಾರ್ಯಕರ್ತರು ಅವರವರ ಮಟ್ಟದಲ್ಲಿ ಚರ್ಚೆ ಮಾಡಿರಬಹುದು ಇಲ್ಲಿಯವರೆಗೂ ನಾನು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

ನಾನು ಸಹ ಮನೆಯಲ್ಲಿದ್ದು ದೀಪಾವಳಿ ಹಬ್ಬವನ್ನು ಆಚರಣೆ ಮಾಡಬಹುದಿತ್ತು. ಆದರೆ ನನ್ನ ಮನಸ್ಸು ತಡೆಯಲಿಲ್ಲ. ಅದಕ್ಕೆ ನೆರೆ ಸಂತ್ರಸ್ತರ ಕಷ್ಟ ನೋವುಗಳಿಗೆ ಸ್ಪಂದನೆ ಮಾಡಲು ಬಂದಿದ್ದೇನೆ. ಪಕ್ಷ ಸಂಘಟನೆಯ ಉದ್ದೇಶವೇ ಇದ್ದಿದ್ದರೆ ನಾನು ಸಮಾವೇಶವನ್ನೆ ಮಾಡುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದರು.

Comments

Leave a Reply

Your email address will not be published. Required fields are marked *