ಗನ್ ತೋರಿಸಿದ್ದಕ್ಕೆ ಪಿಎಸ್‍ಐಗೆ ವ್ಯಕ್ತಿಯಿಂದ ಕಪಾಳ ಮೋಕ್ಷ

ಚಿಕ್ಕಮಗಳೂರು: ಗನ್ ತೋರಿಸಿದ್ದಕ್ಕೆ ಪಿಎಸ್‍ಐಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೂಗ್ತಿ ಹಳ್ಳಿ ಗ್ರಾಮದ ಬಳಿ ಗ್ರಾಮಾಂತರ ಪಿಎಸ್‍ಐ ಗವಿರಾಜ್ ಅವರ ಕಾರಿಗೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭದಲ್ಲಿ ಪಿಎಸ್‍ಐ ಹಾಗೂ ಸ್ಥಳೀಯರ ನಡುವೆ ಗಲಾಟೆಯಾಗಿದ್ದು, ಪಿಎಸ್‍ಐ ಗವಿರಾಜ್ ಜನರ ಮಧ್ಯೆ ಗನ್ ಹೊರಕ್ಕೆ ತೆಗೆದಿದ್ದಾರೆ. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಗವಿರಾಜ್ ಅವರ ಕಪಾಳಕ್ಕೆ ಬಾರಿಸಿದ್ದಾನೆ.

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲೀಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಎಸ್‍ಪಿ ಅಣ್ಣಾಮಲೈ, ನಾನು ತಂದೆ ತಾಯಿಗೆ ಹುಟ್ಟಿರೋದು. ಧೈರ್ಯವಿದ್ದರೆ ರೋಡ್ ಬ್ಲಾಕ್ ಮಾಡಿ ನೋಡೋಣ ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ

ಘಟನೆಗೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರ ಮೇಲೆ ಐಪಿಸಿ ಸೆಕ್ಷನ್ 326, 353, 504, 506ರ ಅನ್ವಯ ಕೇಸ್ ದಾಖಲಿಸಲಾಗಿದೆ.

https://youtu.be/w2t0DayEVa8

 

Comments

Leave a Reply

Your email address will not be published. Required fields are marked *