ಹೆಣ್ಣು ಮಗು ಹುಟ್ಟಿತೆಂದು ಕರುಳಬಳ್ಳಿ ಕತ್ತರಿಸೋ ಮುನ್ನವೇ ಕಂದನ ಕತ್ತು ಬಿಗಿದು ಕೊಂದ ಪಾಪಿ ತಂದೆ!

ಚಿಕ್ಕಮಗಳೂರು: ಮೊದಲ ಮೂರು ಮಕ್ಕಳು ಹೆಣ್ಣು, ನಾಲ್ಕನೆಯದ್ದೂ ಹೆಣ್ಣೆಂದು ತಂದೆಯೇ ಹುಟ್ಟಿದ ಮಗುವಿನ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿರೋ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಸಮೀಪದ ಬಾಳೆಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಿದ್ದ ನಾರಾಯಣ್ ಹಾಗೂ ಶಶಿಕಲಾ ದಂಪತಿಗೆ ಮೊದಲ ಮೂರು ಮಕ್ಕಳು ಹೆಣ್ಣು ಮಕ್ಕಳಾಗಿದ್ವು. ಎರಡು ದಿನದ ಹಿಂದೆ ಜನಿಸಿದ ನಾಲ್ಕನೇ ಮಗುವೂ ಹೆಣ್ಣೆಂಬ ಕಾರಣಕ್ಕೆ ಕರುಳಬಳ್ಳಿ ಕತ್ತರಿಸೋ ಮುನ್ನವೇ ನವಜಾತ ಮಗುವನ್ನ ಸಾಯಿಸಿದ್ದಾನೆ.

ಮಗುವಿನ ಕಳೆಬರಹವನ್ನ ಮರದ ಬಾಕ್ಸ್ ನಲ್ಲಿ ಹಾಕಿ ಎಲ್ಲಿಯಾದ್ರು ಎಸೆಯಲು ತಂದೆ ಯೋಚಿಸಿದ್ದ. ಆದರೆ ವಿಷಯ ತಿಳಿದ ನಾರಾಯಣ್ ಸಹೋದರ ಉಮೇಶ್ ಆಲ್ದೂರು ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ನಾರಾಯಣ್ ನಾಪತ್ತೆಯಾಗಿದ್ದ. ಸ್ಥಳಕ್ಕೆ ಬಂದು ಮಗುವಿನ ಮುಖ ನೋಡಿದ ಪೊಲೀಸರ ಕರುಳು ಕೂಡ ಚುರುಕ್ ಎಂದಿತ್ತು. ಪೊಲೀಸರ ಭಾಷೆಯಲ್ಲಿ “ಎಲ್ಲೋದ ಅವ್ನು” ಎನ್ನುವಷ್ಟರಲ್ಲಿ ಆತ ಕಾಲ್ಕಿತ್ತಿದ್ದ.

ಆದರೆ ತನ್ನ ಗಂಡನ ಈ ಕೃತ್ಯ ನಾರಾಯಣ್ ಹೆಂಡತಿ ಶಶಿಕಾಲಾಗೆ ಗೊತ್ತಿರಲಿಲ್ಲ. ಡೆಲವರಿಯಾಗಿ ಸುಸ್ತಾಗಿದ್ದ ಮಗುವಿನ ತಾಯಿ ಕಣ್ಣು ಬಿಡುವಷ್ಟರಲ್ಲಿ ಮಗು ಕಣ್ಣು ಮುಚ್ಚಿತ್ತು. ತಾಯಿಗೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಿಯಾಗಿ ಮಗುವಿನ ಮುಖ ನೋಡದ ತಾಯಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾರಾಯಣ್ ಸಹೋದರ ನೀಡಿದ ದೂರಿನನ್ವಯ ಆಲ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿದ್ದ ನಾರಾಯಣ್‍ನನ್ನು ಬಂಧಿಸುವಲ್ಲಿ ಯಸಸ್ವಿಯಾಗಿದ್ದಾರೆ.

ಕೋಟ್ಯಾಂತರ ಜನ ಮಕ್ಕಳಿಗಾಗಿ ಪೂಜೆ, ಪುನಸ್ಕಾರ ದೇವರು, ದಿಂಡ್ರು ಅಂತೆಲ್ಲಾ ಪೂಜೆ ಮಾಡಿ ದೇವಾಲಯಗಳಲ್ಲಿ ಉರುಳುಸೇವೆ ಮಾಡ್ತಾರೆ. ಗಂಡೋ-ಹೆಣ್ಣೋ ಒಂದು ಮಗುವಾದ್ರೆ ಸಾಕೆಂದು ಇರೋ ಬರೋ ದೇವರಿಗೆಲ್ಲಾ ಹರಕೆ ಕಟ್ಟಿದ್ರೆ, ಹಲವರು ಆಸ್ಪತ್ರೆಯ ಬಾಗಿಲು ಕಾಯ್ತಾರೆ. ಮಗುವನ್ನು ಸಾಕಲು ಕಷ್ಟವಾಗಿದ್ರೆ ಮಕ್ಕಳಿದ್ದವರಿಗೆ ನೀಡಿದ್ರೆ ಚಿನ್ನದಂತೆ ನೋಡ್ಕೊಳ್ತಿದ್ರು. ಆದ್ರೆ, ಹೆಣ್ಣು ಮಗುವೆಂದು ತಂದೆಯೆ ಇಂತಹ ಹೀನ ಕೃತ್ಯವೆಸಗಿರೋದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.

 

Comments

Leave a Reply

Your email address will not be published. Required fields are marked *