ಚಿಕ್ಕಮಗಳೂರು| ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ – ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ

– ಒಪಿಡಿ ಬಂದ್ ಮಾಡಿ ಸಿಬ್ಬಂದಿ ಆಕ್ರೋಶ

ಚಿಕ್ಕಮಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವೈದ್ಯರ (Doctor) ಮೇಲೆ ಮಹಿಳೆ (Woman) ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

ಮೂಳೆ ತಜ್ಞ ವೆಂಕಟೇಶ್ ಮೇಲೆ ಮಹಿಳೆ ಏಕಾಏಕಿ ಹಲ್ಲೆ ನಡೆಸಿದ್ದು, ಶರ್ಟ್, ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಯುವಕನೋರ್ವ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆ ನೀಡುವ ಸಮಯದಲ್ಲಿ ಮಹಿಳೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಳೆ. ರೋಗಿಯ ಅಕ್ಕನಿಗೆ ವೈದ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆ ಆಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು  ಯುವಕ ಆರೋಪಿಸಿದ್ದಾನೆ. ಇದನ್ನೂ ಓದಿ: Valmiki Scam| ಬಹುಕೋಟಿ ಹಗರಣದ ಮಾಸ್ಟರ್‌ ಮೈಂಡ್‌ ನಾಗೇಂದ್ರ – ಇಡಿ ಚಾರ್ಜ್‌ಶೀಟ್‌ ಸಲ್ಲಿಕೆ

ಘಟನೆಯ ಬಳಿಕ ರಕ್ಷಣೆ ನೀಡುವಂತೆ ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನ್ಯಾಯ ಕೊಡಿಸುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೈಲು ಹಳಿ ಮೇಲೆ ಸಿಮೆಂಟ್ ಬ್ರಿಕ್ಸ್ – ಮತ್ತೊಂದು ದುಷ್ಕೃತ್ಯಕ್ಕೆ ಸಂಚು