– ನಕ್ಸಲ್ ಪರ ಪೋಸ್ಟ್ ಹಾಕಿದ್ದ ಆರೋಪಿ ನ್ಯಾಯಾಂಗ ಬಂಧನಕ್ಕೆ
ಚಿಕ್ಕಬಳ್ಳಾಪುರ/ಬಳ್ಳಾರಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಾರತೀಯ ವೀರ ಯೋಧರ ಹತ್ಯಾಕಾಂಡ ಖಂಡಿಸಿ ಮುಸ್ಲಿಂ ಬಾಂಧವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕೃತ್ಯವನ್ನ ಖಂಡಿಸಿದ್ದಾರೆ.
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರ ಗ್ರಾಮದ 3 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಂ ಬಾಂಧವರು ಗ್ರಾಮದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜೈಶ್-ಇ-ಮಹಮದ್ ಸಂಘಟನೆಯ ನಾಯಕ ಮಹಮದ್ ಅಜರ್ ಹಾಗೂ ಪುಲ್ವಾಮ ಕೃತ್ಯದ ಉಗ್ರ ಅದಿಲ್ ಮಹಮದ್ ದರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾಪಿ ಪಾಕಿಸ್ತಾನದ ಹಾಗೂ ಉಗ್ರ ಸಂಘಟನೆಯ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ ಪ್ರತಿಭಟನಾಕಾರರು, ವೀರ ಮರಣವನ್ನಪ್ಪಿದ ಹುತಾತ್ಮ ಯೋಧರು ಹಾಗೂ ಭಾರತೀಯ ಸೇನೆಗೆ ಜೈಕಾರ ಹಾಕಿದರು. ತ್ರಿವರ್ಣ ಧ್ವಜ, ಕರ್ನಾಟಕ ಬಾವುಟ ಹಿಡಿದು ಮೆರವಣಿಗೆ ನಡೆಸಿದ ವೇಳೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು.
ಇತ್ತ ನಕ್ಸಲ್ ವಾದಿಗಳಿಗೆ ಬೆಂಬಲಿಸಿ ಪೋಸ್ಟ್ ಮಾಡಿದ್ದ ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಗ್ರಾಮದ ರಾಹುಲ್ ಪಾಸ್ವಾನ್ (20) ಪೊಲೀಸರ ಅತಿಥಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರೋಪಿ ರಾಹುಲ್ ನಕ್ಸಲ್ ವಾದಿಗಳಿಗೆ ಬೆಂಬಲಿಸಿ ಪೋಸ್ಟ್ ಹಾಕಿದ್ದ. ಅಷ್ಟೇ ಅಲ್ಲದೇ ಭಾರತೀಯ ಸೈನಿಕರಿಗೆ ಅಶ್ಲೀಲವಾಗಿ ನಿಂದಿಸಿ ಕಮೆಂಟ್ ಮಾಡಿದ್ದ. ಸದ್ಯ ಆರೋಪಿ ರಾಹುಲ್ ನನ್ನು ತೋರಣಗಲ್ ಪೊಲೀಸರು ಬಂಧಿಸಿದ್ದು, ಸದ್ಯ ರಾಹುಲ್ ನನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply