ಸಿಲ್ಕ್ ಗೋದಾಮಿನಲ್ಲಿ ಬೆಂಕಿ – 5 ಲಕ್ಷ ಮೌಲ್ಯದ ಕಚ್ಚಾ ಸಿಲ್ಕ್ ಬೆಂಕಿಗಾಹುತಿ

ಚಿಕ್ಕಬಳ್ಳಾಪುರ: ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಸಿಲ್ಕ್ ಗೋದಾಮಿನಲ್ಲಿದ್ದ 5 ಲಕ್ಷ ಮೌಲ್ಯದ ಕಚ್ಚಾ ಸಿಲ್ಕ್ ಸುಟ್ಟು ಬೂದಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಕೊಂಗಾಡಿಯಪ್ಪ ಕಾಲೇಜ್ ಬಳಿ ನಡೆದಿದೆ.

ನವಾಬ್ ಎಂಬವರಿಗೆ ಸೇರಿದ ಸಿಲ್ಕ್ ಗೋಡಾನ್ ಇದಾಗಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಬೆಂಕಿ ಅವಘಡಕ್ಕೆ ಗೋಡಾನ್‍ನಲ್ಲಿ ಇಟ್ಟಿದ್ದ 5 ಲಕ್ಷ ಮೌಲ್ಯದ ಕಚ್ಚಾ ಸಿಲ್ಕ್ ಸಂಪೂರ್ಣ ಸುಟ್ಟು ಬೂದಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಡಾನ್ ಪಕ್ಕದಲ್ಲಿಯೇ ಸರಸ್ವತಿ ಶಾಲೆ ಇದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *