ಲಾರಿಗಳ ನಡುವೆ ಡಿಕ್ಕಿ-ಚಾಲಕ ಸಜೀವ ದಹನ

ಚಿಕ್ಕಬಳ್ಳಾಪುರ: ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಚಾಲಕ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ.

ವಸಂತ್ ಕುಮಾರ್ ಮೃತನಾಗಿದ್ದಾನೆ. ಲಾರಿಗಳು ಒಂದಕ್ಕೋಂದು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಪರಿಣಾಮವಾಗಿ ಚಾಲಕ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ, ರಾಣಿ ಕ್ರಾಸ್ ಬಳಿಯ ಭುಕ್ತಿ ಡಾಬಾ ಬಳಿ ತಡರಾತ್ರಿ ನಡೆದಿದೆ.

ನಡೆದಿದ್ದೇನು?: ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಚಿಕ್ಕಬಳ್ಳಾಪುರದ ಕಡೆಯಿಂದ ಬೆಂಗಳೂರು ಕಡೆಗೆ ಲಾರಿ ಸಿಮೆಂಟ್ ಮೂಟೆಗಳನ್ನ ಹೊತ್ತು ಹೊಗುತ್ತಿತ್ತು. ಈ ವೇಳೆ ಬೃಹತ್ ಉದ್ದದ ಎರಡು ಲಾರಿಗಳ ನಡುವೆ ಓವರ್ ಟೇಕ್ ಮಾಡುವ ಭರದಲ್ಲಿ ಒಂದಕ್ಕೊಂದು ಡಿಕ್ಕಿಯಾಗಿವೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

ಅಪಘಾತದಲ್ಲಿ ಲಾರಿಯೊಂದು ಸಂಪೂರ್ಣ ಪಲ್ಟಿಯಾಗಿದ್ದು, ಮತ್ತೊಂದು ಲಾರಿಗೆ ರಸ್ತೆ ಡಿವೈಡರ್ ಮೇಲೆ ಹರಿದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಲಾರಿಯಲ್ಲಿದ್ದ ಚಾಲಕ ಸಹ ಸಜೀವ ದಹನವಾಗಿದ್ದಾನೆ. ಲಾರಿ ಚಾಲಕ ಬಾಗೇಪಲ್ಲಿ ಮೂಲದ ವಸಂತ್ ಕುಮಾರ್ ಅಂತ ತಿಳಿದುಬಂದಿದೆ. ಮತ್ತೊಂದು ಲಾರಿ ಚಾಲಕ ವೇಲು ಎಂಬಾ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ನಂತರ ಸ್ಥಳಕ್ಕೆ ಬಂದ ಆಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ದೇವನಹಳ್ಳಿ ಹಾಗೂ ವಿಜಯಪುರ ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

 

Comments

Leave a Reply

Your email address will not be published. Required fields are marked *