ಚಿಕ್ಕಬಳ್ಳಾಪುರ SJCIT ಕಾಲೇಜು ವಿದ್ಯಾರ್ಥಿಗಳ ಡಿಫರೆಂಟ್ ಲುಕ್, ಮಸ್ತ್ ಮಸ್ತ್ ಡ್ಯಾನ್ಸ್

ಚಿಕ್ಕಬಳ್ಳಾಪುರ: ಕಲರ್ ಪುಲ್ ಕಾಸ್ಟೂಮ್ಸ್ ತೊಟ್ಟು ಮಿರ ಮಿರ ಅಂತ ಚೆಂದುಳ್ಳಿ ಚೆಲುವೆಯರು ಮಿಂಚುತ್ತಿದ್ರೆ, ನಾವೇನು ಕಮ್ಮಿ ಅಂತ ಪಂಚೆ ಶರ್ಟು ತೊಟ್ಟು ಪಡ್ಡೆ ಹುಡುಗುರು ತಮಟೆ ಸದ್ದಿಗೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡ್ತಿದ್ದರು. ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿಗಳಿಂದ ನಗರದ ಎಸ್‍ಜೆಸಿಐಟಿ ಕಾಲೇಜು ಕ್ಯಾಂಪಸ್ ಕಲರ್ ಪುಲ್ ಕಂಗೊಳಿಸುತ್ತಿತ್ತು.

ನಗರದ ಹೊರವಲಯದ ಎಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ಇಂದು ಎತ್ನಿಕ್ ಡೇ ಅಂಗವಾಗಿ ರಂಗು ರಂಗಿನ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ವಿದ್ಯಾರ್ಥಿಗಳಿಂದ ಮಿಂಚುತ್ತಿತ್ತು. ಪ್ರತಿದಿನ ಕಾಲೇಜು ಸಮವಸ್ತ್ರ ತೊಟ್ಟು ಬೋರ್ ಹೊಡೆದಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇಂದು ತಮಗಿಷ್ಟದ ಸಾಂಪ್ರದಾಯಿಕ ಶೈಲಿಯ ಡ್ರೆಸ್ ತೊಟ್ಟು ಖುಷಿಪಟ್ಟರು.

ಕಾಲೇಜಿನ ಲಲನೆಯರು ಮಾಡೆಲ್‍ಗಳ ಹಾಗೆ ನಡೆಸಿದ ಕ್ಯಾಟ್ ವಾಕ್ ಎಲ್ಲರನ್ನು ಮೆಚ್ಚಿಸಿತು. ಹುಡುಗರು ನಾವೇನೂ ಯಾರಿಗೂ ಕಡಿಮೆಯಿಲ್ಲ ಎಂದು ಹಳ್ಳಿ ಹೈದರಂತೆ ಬಟ್ಟೆ ತೊಟ್ಟು ತಿರುಗಾಡುತ್ತಿದ್ದರು. ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಎತ್ನಿಕ್ ಡೇಯನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

 

Comments

Leave a Reply

Your email address will not be published. Required fields are marked *