ವ್ಯಾಪಾರ ಧರ್ಮ ಯುದ್ಧದ ವ್ಯಾಪ್ತಿ ವಿಸ್ತರಣೆ- ಮುಸ್ಲಿಂ ಅಂಗಡಿ ಬಹಿಷ್ಕಾರ ಚಳವಳಿಗೆ ಮುತಾಲಿಕ್ ಕರೆ

ಬೆಂಗಳೂರು: ರಾಜ್ಯದಲ್ಲಿ ವ್ಯಾಪಾರ ಧರ್ಮ ಯುದ್ಧದ ವ್ಯಾಪ್ತಿ ವಿಸ್ತರಣೆ ಆಗುತ್ತಿದೆ. ಯಾರು ಕೂಡ ಊಹಿಸಲಾಗದ ಮಟ್ಟಕ್ಕೆ ಹೋಗುತ್ತಿದೆ. ಹಿಂದೂ ಸಂಘಟನೆಗಳು ಇನ್ನಷ್ಟು ಉಗ್ರ ಹೋರಾಟಕ್ಕೆ ಮುಂದಾಗಿವೆ. ಶ್ರೀರಾಮಸೇನೆಯಂತೂ ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ಕೊಟ್ಟಿದೆ. ಮುಸ್ಲಿಮರು ಗೋಹತ್ಯೆ, ಗೋಮಾಂಸ ತಿನ್ನೋದನ್ನು ನಿಲ್ಲಿಸೋವರೆಗೂ, ಅವರ ಜೊತೆ ವ್ಯಾಪಾರ ನಿಲ್ಲಿಸುವಂತೆ ಮುತಾಲಿಕ್ ಕರೆ ನೀಡಿದ್ದಾರೆ.

ರಾಜ್ಯಾದ್ಯಂತ ಇರುವ ಮುಸ್ಲಿಮರ ಅಂಗಡಿ ಪಟ್ಟಿ ಮಾಡಿ, ಅಲ್ಲಿಗೆ ಹೋಗಬಾರದೆಂದು ಶ್ರೀರಾಮಸೇನೆ ಕರೆ ಕೊಟ್ಟಿದೆ. ಈ ಮಧ್ಯೆ, ಹಿಂದೂ ದೇವಾಲಯಗಳಲ್ಲಿರುವ ಹಿಂದೂಯೇತರ ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾಯಿಸುವಂತೆ ಅರ್ಚಕರು, ಆಗಮಿಕರ ಸಂಘ ಒತ್ತಾಯಿಸಿದೆ. ಈ ಸಂಬಂಧ ಹಿಂದೂ ಜಾಗೃತಿ ಸಮಿತಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿಗೆ ಮನವಿ ಪತ್ರ ಸಲ್ಲಿಸಿದೆ. ಮಂಗಳೂರಿನ ಬಪ್ಪನಾಡು ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಮುಂದುವರೆದಿದೆ. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಬಿಜೆಪಿಯ ಹಿಡನ್ ಅಜೆಂಡಾ: ಸತೀಶ್ ಜಾರಕಿಹೊಳಿ

ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲಿ ಸ್ಟಾಲ್ ಹಾಕಲು ಬಂದಿದ್ದ ಮುಸ್ಲಿಮರು ನಿರಾಸೆಯಿಂದ ವಾಪಸ್ ಆಗಿದ್ದಾರೆ. ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ವಿಹೆಚ್‍ಪಿ ಒತ್ತಾಯಿಸಿದೆ. ಶಿವಮೊಗ್ಗದ ಸಾಗರ, ಉಡುಪಿಯ ನಂದಿಕೇಶ್ವರ ಜಾತ್ರೆ, ಕಲಬುರಗಿ ದೇವಾಲಯಗಳ ಬಳಿ ಹಿಂದುಯೇತರರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡಬಾರದು ಎಂದು ಒತ್ತಾಯ ಕೇಳಿಬಂದಿದೆ. ಇನ್ನು, ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರೋದನ್ನು ವಿಹೆಚ್‍ಪಿ ಸ್ವಾಗತಿಸಿದೆ. ಇದೆಲ್ಲರದ ನಡ್ವೆ, 2001ರಿಂದ 2004ರವರೆಗೆ ಮುಜರಾಯಿ ಸಚಿವೆಯಾಗಿದ್ದ ಸುಮಾ ವಸಂತ್ ಮಾತನಾಡಿ, ನಮ್ಮ ಅವಧಿಯಲ್ಲಿ ಈ ಕಾಯ್ದೆ ರಚನೆ ಆಗಿರುವ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದಿದ್ದಾರೆ. ಆದ್ರೆ ಇದು ಅಧಿಕಾರಿಗಳ ಕೆಲಸ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ದೇವರಹೋಸಹಳ್ಳಿ ಬ್ರಹ್ಮರಥೋತ್ಸವ – ಹಿಂದೂ, ಮುಸ್ಲಿಂ ಭಾವೈಕ್ಯ ಸಾಕ್ಷಿ

ಈ ಮಧ್ಯೆ ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ ಸದನದಲ್ಲಿ ಪ್ರತಿಧ್ವನಿಸಿದೆ. ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ನೆಮ್ಮದಿ ಕೆದಡಿಸಿದೆ ಎಂದು ಆಪಾದಿಸಿದ್ರು. ರಾಜಕಾರಣದಲ್ಲಿ ಧರ್ಮ ಬೆರೆಸುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೇ ನಮ್ಮ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕುಸಿದಿದೆ. ಇದ್ರಿಂದ ಹಲವು ಸಂಸ್ಥೆಗಳು ತಮಿಳುನಾಡಿಗೆ ವಲಸೆ ಹೋದ್ವು ಎನ್ನುತ್ತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು. ಇದೇ ವೇಳೆ, ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರದ ವಿಚಾರ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಆರಗಜ್ಞಾನೇಂದ್ರ ನಡ್ವೆ ವಾಕ್ಸಮರಕ್ಕೂ ಕಾರಣವಾಯ್ತು. ಸಿದ್ದರಾಮಯ್ಯ ಮೈಸೂರು ರೇಪ್ ಕೇಸ್ ಪ್ರಸ್ತಾಪಿಸಿದಾಗಲೂ ಮಂತ್ರಿಯೊಬ್ಬರ ಪ್ರಕರಣ ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ರು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

Comments

Leave a Reply

Your email address will not be published. Required fields are marked *