ಗಣೇಶೋತ್ಸವಕ್ಕೆ ನಾಳೆ ಸಿಗುತ್ತಾ ಅನುಮತಿ..? – ಸಂಪುಟ ಸಭೆ ಬಳಿಕ ಸಿಎಂ ಘೋಷಣೆ ಸಾಧ್ಯತೆ

BASAVARAJ BOMMAI

ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನು ಐದೇ ದಿನ ಬಾಕಿ. ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯಾದ್ಯಂತ ವ್ಯಾಪಕ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ನಾಳೆ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದ್ದು, ಬಳಿಕ ಸಿಎಂ ಬೊಮ್ಮಾಯಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಳೆದ ಬಾರಿಯ ಸಭೆಯಲ್ಲೇ ಆದೇಶ ಹೊರಡುತ್ತೆ ಎನ್ನಲಾಗಿತ್ತು. ಆದರೆ ಸಿಎಂ ಮಾತ್ರ ಡಿಸಿಗಳಿಂದ ಮಾಹಿತಿ ಪಡೆದು ಸರಿಯಾದ ಸಮಯಕ್ಕೆ ಸರಿಯಾದ ನಿರ್ಣ ತೆಗೆದುಕೊಳ್ತೇವೆ ಅಂತ ಹೇಳಿದ್ದರು. ಸಚಿವರು, ಹಿಂದೂಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿವೆ. ಸಚಿವರ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ ಅಂತ ತಿಳಿದು ಬಂದಿದೆ.

ಕಂದಾಯ ಸಚಿವ ಅಶೋಕ್ ಮಾತಾಡಿ, ಗಣೇಶೋತ್ಸವಕ್ಕೆ ವಿನಾಯ್ತಿ ಕೊಡುವಂತೆ ಮನವಿ ಮಾಡಿದ್ದೇವೆ. ಕಳೆದ ಸಲಕ್ಕಿಂತಲೂ ಹೆಚ್ಚು ವಿನಾಯಿತಿ ಕೊಡುವ ಭರವಸೆ ಇದೆ ಅಂತ ಹೇಳಿದ್ದಾರೆ. ಆದರೆ ಹಬ್ಬ ಹರಿದಿನಗಳಿಗೆ ಹೆಚ್ಚಿನ ಅನುಮತಿ ಬೇಡ ಅಂತ ಕೇಂದ್ರ ಗೃಹ ಇಲಾಖೆ, ರಾಜ್ಯದ ಕೊವಿಡ್ ತಾಂತ್ರಿಕ ಸಮಿತಿ ಮತ್ತು ಬಿಬಿಎಂಪಿ ಶಿಫಾರಸ್ಸು ಮಾಡಿರೋ ಕಾರಣ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕೃಷಿಕರ ಮಗಳಾಗಿದ್ದರಿಂದ ನನಗೆ ಕೃಷಿ ಖಾತೆ ಸಿಕ್ಕಿದೆ: ಶೋಭಾ ಕರಂದ್ಲಾಜೆ

ಗಣೇಶೋತ್ಸವಕ್ಕೆ ಷರತ್ತಿನ ಅನುಮತಿ..?
ರಸ್ತೆಯಲ್ಲಿ ಗಣೇಶ ಮೂರ್ತಿ ಕೂರಿಸಲು ಅವಕಾಶ ಇಲ್ಲ. ಪೆಂಡಾಲ್ ಹಾಕಿ ಗಣೇಶ ಉತ್ಸವ ಮಾಡುವಂತಿಲ್ಲ. ಡ್ಯಾನ್ಸ್, ಆರ್ಕೆಸ್ಟ್ರಾ, ಮೆರವಣಿಗೆಗೆ ಅವಕಾಶ ಇಲ್ಲ. ನಿಗದಿತ ಸ್ಥಳಗಳಲ್ಲಿ ಮಾತ್ರ ಮೂರ್ತಿ ವಿಸರ್ಜಿಸಬೇಕು. ಮನೆ ಬಾಗಿಲಿಗೂ ಬರಲಿದೆ ಗಣೇಶ ವಿಸರ್ಜನೆ ಟ್ಯಾಂಕರ್. ಪ್ರಸಾದ ಎಂದು ಮನೆ ಮನೆ ಎದುರು ಜನರ ಕ್ಯೂ ನಿಲ್ಲಿಸುವಂತಿಲ್ಲ. ವಿಸರ್ಜನೆ ವೇಳೆಯೂ 10 ಜನರು ಮಾತ್ರ ಸೇರಲು ಅವಕಾಶ ನೀಡುವ ಸಾಧ್ಯತೆಗಳಿವೆ.

ಒಂದೆಡೆ ಅಕ್ಟೋಬರ್‍ನಲ್ಲಿ 3ನೇ ಅಲೆ ಆತಂಕದ ಮಧ್ಯೆ, ಸಾರ್ವತ್ರಿಕ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತಾ.. ಇಲ್ವಾ..? ಅನುಮತಿ ಕೊಟ್ಟಲ್ಲಿ ಏನೆಲ್ಲಾ ಷರತ್ತು ಇರಲಿದೆ ಅನ್ನೋದರ ನಾಳಿನ ಕ್ಯಾಬಿನೆಟ್ ಸಭೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‍ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ: ಅಶ್ವಥ್ ನಾರಾಯಣ

Comments

Leave a Reply

Your email address will not be published. Required fields are marked *