ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ

ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿಗಳು ಮಂಡಿ ನೋವಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳುತ್ತಿದ್ದಾರೆಂದು ಮತ್ತು ಸಂಕ್ರಾಂತಿ ನಂತರ ರಾಜ್ಯ ಮತ್ತೊಬ್ಬ ಮುಖ್ಯಮಂತ್ರಿಯನ್ನು ಕಾಣಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬೊಮ್ಮಾಯಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಲಭ್ಯವಾಗಿದೆ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದ ಲೋಕೇಶ್ ಟೇಕಲ್ ಅವರನ್ನು ಸಂಪರ್ಕಿಸಿ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ ಲೋಕೇಶ್ ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದ ಬ್ಲಾಕ್ ಫಂಗಸ್‌ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿದ್ದು, ಈ ವಿಷಯವನ್ನು ಲಕ್ಷಣ ಸವದಿ ಮೊನ್ನೆ ಮೆಲ್ಮನೆಯಲ್ಲಿ ಪ್ರಸ್ತಾಪಿಸಿದ್ದರು. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

ಆಯುಷ್‌ಗೆ ಸಂಬಂಧಪಟ್ಟಂತೆ ಮೆಲ್ಮನೆಯಲ್ಲಿ ಆಯುಷ್ ವಿಧೇಯಕವನ್ನು ಮಂಡಿಸಲಾಗಿದೆ. ನಾಟಿ ವೈದ್ಯ ಲೋಕೇಸ್ ಟೆಕಲ್ ಈಗಾಗಲೇ ಕ್ಯಾನ್ಸರ್, ಬ್ಲಾಕ್ ಫಂಗಸ್, ಕೊರೊನಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

ಸದ್ಯ ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೇಕೆ ಹಾಲು ಕುಡಿಯುವಂತೆ ಸಲಹೆ ನೀಡಿದ್ದಾರೆ. ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಕ್ಯಾಲ್ಶಿಯಂ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ.

ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚರ್ಮ ರೋಗದಿಂದ ಗುಣಮುಖರಾಗಿದ್ದು, ಅವರೇ ಮುಂದಾಗಿ ಮುಖ್ಯಮಂತ್ರಿಗಳಿಗೆ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

Comments

Leave a Reply

Your email address will not be published. Required fields are marked *