‘ದೊಡ್ಡ ದೊಡ್ಡ’ ಖಾತೆ ಸೇರಿ 22 ಖಾತೆಗಳಿಗೆ ಬಿಎಸ್‍ವೈಯೇ ಸಚಿವ!

ಬೆಂಗಳೂರು: 17 ಮಂದಿ ಸಚಿವರಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಅರ್ಧ ಎಂಬ ಟೀಕೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಹೌದು. ಬಿ.ಎಸ್.ಯಡಿಯೂರಪ್ಪನವರ ಕೈಯಲ್ಲೇ ಅರ್ಧಕರ್ಧ ಖಾತೆಗಳಿವೆ. ಯಾರಿಗೂ ಹಂಚಿಕೆ ಮಾಡದೇ ಮುಖ್ಯಮಂತ್ರಿಗಳು ಬರೊಬ್ಬರಿ 22 ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಈ ಖಾತೆಗಳಿಗೆ ಬಿಎಸ್‍ವೈ ಅವರೇ ಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ಮೂವರು ಡಿಸಿಎಂ, ಬೊಮ್ಮಾಯಿಗೆ ಗೃಹ, ಸವದಿಗೆ ಸಾರಿಗೆ – ಯಾರಿಗೆ ಯಾವ ಖಾತೆ?

ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಒಟ್ಟು 45 ಖಾತೆಗಳಿದ್ದು, ಅವುಗಳಲ್ಲಿ 17 ಸಚಿವರಿಗೆ ಬರೀ 23 ಖಾತೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಅದರಲ್ಲೂ ಹಣಕಾಸು, ಇಂಧನ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ದೊಡ್ಡ ದೊಡ್ಡ ಖಾತೆಗಳನ್ನೇ ಸಿಎಂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಸಿಎಂ ಬಳಿ ಇರುವ ಖಾತೆಗಳು:
ಹಣಕಾಸು, ಗುಪ್ತಚರ, ಇಂಧನ, ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ನಗರಾಭಿವೃದ್ಧಿ, ಕೃಷಿ, ಅರಣ್ಯ, ಸಕ್ಕರೆ, ಸಹಕಾರ, ಸಣ್ಣ ಕೈಗಾರಿಕೆ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಕಲ್ಯಾಣ, ಯುವಜನ ಸೇವೆ ಮತ್ತು ಕ್ರೀಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ, ತೋಟಗಾರಿಕೆ, ರೇಷ್ಮೆ, ಪೌರಾಡಳಿತ, ಕೌಶಲ್ಯಾಭಿವೃದ್ಧಿ ಹಾಗೂ ಒಳನಾಡು ಜಲಸಾರಿಗೆ ಖಾತೆಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಇವೆ.

Comments

Leave a Reply

Your email address will not be published. Required fields are marked *