ಚೇತೇಶ್ವರ ಪೂಜಾರ ಖಾಸಗಿ ಜೀವನ ರಿವೀಲ್

ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ಸ್ಟಾರ್ ಕ್ರಿಕೆಟಿಗ ಚೇತೇಶ್ವರ ಪುಜಾರ ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಆಡುತ್ತಿದ್ದಾರೆ. ಸೌರಾಷ್ಟ್ರ ಪರವಾಗಿ ಆಡುತ್ತಿರುವ ಮೊದಲ ಪಂದ್ಯದಲ್ಲಿ ಕಮಾಲ್ ಮಾಡುವಲ್ಲಿ ಪೂಜಾರ ವಿಫಲರಾದ್ರು. ಈ ಪಂದ್ಯಗಳ ಬ್ಯುಸಿ ಶೆಡ್ಯೂಲ್ ನಲ್ಲಿ ಬಿಡುವು ಮಾಡಿಕೊಂಡ ಪೂಜಾರ ಪತ್ನಿ ಪೂಜಾರೊಂದಿಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪೂಜಾ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪತಿಯ ಖಾಸಗಿ ಜೀವನದ ಶೈಲಿಯನ್ನು ರಿವೀಲ್ ಮಾಡಿದ್ದಾರೆ.

ಪೂಜಾರ ತುಂಬಾ ಶಾಂತ ಸ್ವಭಾವದ ವ್ಯಕ್ತಿಯಾಗಿದ್ದು, ಹೆಚ್ಚು ಮಾತನಾಡಲ್ಲ. ಮನೆಯ ಸ್ವಚ್ಛತೆ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದು, ಏನಾದ್ರೂ ಕಸ ಕಂಡರೆ ತಾವೇ ಸ್ವಚ್ಛಗೊಳಿಸಲು ಸಿದ್ಧರಾಗಿ ಬಿಡುತ್ತಾರೆ. ಪತಿ ಮನೆಯಲ್ಲಿದ್ದಾಗ ಎಲ್ಲ ಕೆಲಸಗಾರರು ಸೇರಿದಂತೆ ನಾನು ತುಂಬಾ ಆ್ಯಕ್ಟೀವ್ ಆಗಿರುತ್ತೇವೆ. ಮನೆಯನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತೇವೆ. ಮನೆಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾದ್ರೆ, ಯಾರಿಗೂ ಹೇಳದೇ ತಾವೇ ಸ್ವಚ್ಛ ಮಾಡ್ತಾರೆ ಎಂದು ಪೂಜಾ ಹೇಳಿದ್ದಾರೆ.

ಮನೆಯಲ್ಲಿ ಎಲ್ಲ ಸದಸ್ಯರೊಂದಿಗೆ ಕುಳಿತು ಆರಾಮವಾಗಿ ಮಾತನಾಡುತ್ತಾರೆ. ಮಗಳ ಜೊತೆ ಹೆಚ್ಚು ಸಮಯ ಕಳೆಯಲು ಪೂಜಾರ ಇಷ್ಟಪಡುತ್ತಾರೆ. ಪಂದ್ಯಗಳಿಂದಾಗಿ ಮನೆಯಿಂದ ಹೊರ ಇರಬೇಕಾಗಿರುವುದರಿಂದ ಸಮಯ ಸಿಕ್ಕಾಗ ಮಗಳೊಂದಿಗೆ ಆಟ ಆಡುತ್ತಾರೆ. ನನ್ನ ಮಾವನವರಂತೂ 24 ಗಂಟೆ ಕ್ರಿಕೆಟ್ ಬಗ್ಗೆ ಮಾತನಾಡುತ್ತಾರೆ. ಒಂದು ದಿನ ಸಹ ಕ್ರಿಕೆಟ್ ಬಗ್ಗೆ ಮಾತನಾಡಲು ಬೋರ್ ಮಾಡಿಕೊಳ್ಳುವುದಿಲ್ಲ. ಪೂಜಾರ ಆಡುತ್ತಿದ್ರೆ ಮಾತ್ರವಲ್ಲದೇ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿರುತ್ತಾರೆ ಎಂದು ಪೂಜಾ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *