ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ

ಚಿಕ್ಕಮಗಳೂರು: ಆನೆ ದಂತದಲ್ಲಿ ಚದುರಂಗದ ಪಾನ್ ಹಾಗೂ ಬಾಕ್ಸ್ ನಿರ್ಮಾಣ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿ ಅರಣ್ಯ ಇಲಾಖೆಯ ಸಿಐಡಿ ಸಂಚಾರಿ ದಳದ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಹಾಸನ ಜಿಲ್ಲೆ ಸಕಲೇಶಪುರ ಮೂಲದ ಮೆಲ್ವಿನ್ ಆನೆ ದಂತದಿಂದ ನಿರ್ಮಿಸಿದ್ದ 16 ಕಪ್ಪು ಬಣ್ಣದ ಪಾನ್‍ಗಳು ಹಾಗೂ 16 ಬಿಳಿ ಬಣ್ಣದ ಪಾನ್‍ಗಳನ್ನ ಕೆತ್ತನೆ ಮಾಡಿದ್ದನು. ಜೊತೆಗೆ ಚೆಸ್ ಪಾನ್‍ಗಳನ್ನು ಇಡುವ ಬಾಕ್ಸ್ ಕೂಡ ಆನೆ ದಂತದಲ್ಲಿ ನಿರ್ಮಾಣ ಮಾಡಿದ್ದನು. ಇದನ್ನೂ ಓದಿ:  ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ 

ಇದನ್ನು ಮಾರಾಟ ಮಾಡಲು ಯತ್ನಿಸುವಾಗ ನಗರದ ಸಂಚಾರಿ ಅರಣ್ಯ ದಳದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ಆನೆ ದಂತದಿಂದ ಕೆತ್ತನೆ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಜೊತೆ ಟ್ರೋಫಿಗೆ ಹಾಕಿದ್ದ ಜಿಂಕೆಯ ಕೊಂಬನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಬಂಧಿಸಿದ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿ ಮೆಲ್ವಿನ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಶರತ್ ಸೇರಿದಂತೆ ಇತರೆ ಸಿಬ್ಬಂದಿಗಳಾದ ಹೆಚ್.ದೇವರಾಜು, ದಿನೇಶ್, ದಿವಾಕರ್, ಹಾಲೇಶ್, ಹೇಮಾವತಿ ಹಾಗೂ ಚಾಲಕ ತಿಮ್ಮಶೆಟ್ಟಿ ಭಾಗವಹಿಸಿದ್ದರು. ಇದನ್ನೂ ಓದಿ: ಬಾತ್‌ರೂಮ್‌ ಗೋಡೆಯಲ್ಲಿ ಸಿಕ್ತು 60 ವರ್ಷದ ಮೆಕ್‍ಡೊನಾಲ್ಡ್ಸ್ ಊಟ!

Comments

Leave a Reply

Your email address will not be published. Required fields are marked *