ಟ್ಯಾಟೂ, ಹೊಟ್ಟೆ ತೋರಿಸು: ಜಾಬ್ ಇಂಟರ್ವ್ಯೂ ವೇಳೆ ಯುವತಿಗೆ ಸಂದರ್ಶಕನ ಪ್ರಶ್ನೆ

ಚೆನ್ನೈ: ಸಂದರ್ಶನ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ತಮಿಳುನಾಡಿನ ಸಂತ್ರಸ್ತ ಯುವತಿ ತನಗಾದ ಅನ್ಯಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈಗ ಈ ಪೋಸ್ಟ್ ವೈರಲ್ ಆಗಿದೆ.

ಇತ್ತೀಚಿಗೆ ನಾನು ಕೆಲಸಕ್ಕಾಗಿ ಅಪ್ಲೈ ಮಾಡಿದೆ ಹಾಗೂ ನನ್ನ ಎಲ್ಲ ಸ್ನೇಹಿತರು ನನ್ನ ಫೋನ್ ನಂಬರ್ ನನ್ನು ಅವರಿಗೆ ಗೊತ್ತಿರುವ ವ್ಯಕ್ತಿಗಳಿಗೆ ನೀಡಿದ್ದರು. ಆಗ ಯಾರೋ ಒಬ್ಬರು ಏರ್ ಫ್ರಾನ್ಸ್ ನಿಂದ ಕರೆ ಮಾಡಿದ ವೇಳೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ನಮ್ಯಾ ಬೈಡ್ ಎಂಬವರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ವ್ಯಕ್ತಿಯೊಬ್ಬ ಕರೆ ಮಾಡಿ ನಾನು ದೀಪಕ್ ಹಾಗೂ ಏರ್ ಫ್ರಾನ್ಸ್ ನ ಉದ್ಯೋಗಿ ಎಂದು ಹೇಳಿಕೊಂಡು ಪರಿಚಯಿಸಿದ್ದ. ಎರಡನೇ ಸುತ್ತಿನ ಸಂದರ್ಶನಕ್ಕಾಗಿ ಬೇರೆ ವ್ಯಕ್ತಿ ಕರೆ ಮಾಡುತ್ತಾರೆ ಎಂದು ಹೇಳಿ ಕಾಲ್ ಕಟ್ ಮಾಡಿದ್ದ. ಆದರೆ ಎರಡನೇ ಸುತ್ತಿನಲ್ಲಿ ಆ ವ್ಯಕ್ತಿನೇ ಕರೆ ಮಾಡಿ, ಸಂದರ್ಶನ ಸಲುವಾಗಿ ವಿಡಿಯೋ ಕಾಲ್ ಮಾಡಬೇಕಾಗುತ್ತದೆ ಹಾಗೂ ಯಾರೂ ಇಲ್ಲದ ಕೊಠಡಿಗೆ ಹೋಗಿ ನೀವು ಮಾತನಾಡಬೇಕು ಎಂದು ತಿಳಿಸಿದ್ದನು. ನಂತರ ನಾನು ಹಾಕಿದ ಉಡುಪಿನ ಬಣ್ಣಗಳ ಬಗ್ಗೆ ಕೇಳುತ್ತಿದ್ದ.

ಕೆಲವು ಸಮಯದ ನಂತರ ಆ ವ್ಯಕ್ತಿ ವಿಡಿಯೋ ಕಾಲ್ ಮಾಡಿ ತನ್ನ ಹೆಸರು ಡಾ. ಮನೀಶ್ ರಾವ್ ಎಂದು ಹೇಳಿಕೊಂಡನು. ನನ್ನ ಎತ್ತರ ಹಾಗೂ ತೂಕವನ್ನು ತೋರಿಸಲು ಹೇಳಿದ್ದನು. ನಂತರ ನಾನು ಹಾಕಿದ ಟ್ಯಾಟು ಹಾಗೂ ನನ್ನ ಹೊಟ್ಟೆಯನ್ನು ತೋರಿಸು ಎಂದು ಹೇಳುತ್ತಿದ್ದನು. ಇದರಿಂದ ನಾನು ಮುಜುಗುರಗೊಂಡು ನಾನು ಆ ರೀತಿ ಮಾಡಲು ನಿರಾಕರಿಸಿದೆ. ನಂತರ ಸಮಯಪ್ರಜ್ಞೆಯಿಂದ ಆ ವ್ಯಕ್ತಿಯಿಂದ ದೂರವಾಗಿ ಆತನ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡೆ ಎಂದು ನಮ್ಯ ಪೋಸ್ಟ್ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *