ಚೆನ್ನೈ: ಚರಂಡಿ ಮಧ್ಯೆ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ಮಹಿಳೆಯೊಬ್ಬರು ರಕ್ಷಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯಂದೇ ಸಿಕ್ಕ ಮಗುವಿಗೆ ‘ಸ್ವಾತಂತ್ರ್ಯ’ ಎಂದು ನಾಮಕರಣ ಮಾಡಲಾಗಿದೆ.
ಬುಧವಾರ ಮುಂಜಾನೆ ಚೆನ್ನೈನ ಎಸ್‍ವಿಎಸ್ ನಗರದಲ್ಲಿ ಗೀತಾ ಎಂಬವರು ಮಗು ಅಳುತ್ತಿರುವುದನ್ನು ಕೇಳಿದ್ದರು. ಚರಂಡಿಯಲ್ಲಿ ಮಗುವಿನ ಧ್ವನಿ ಕೇಳಿದ್ದರಿಂದ, ತಕ್ಷಣವೇ ಚರಂಡಿಯಲ್ಲಿ ಹುಡುಕಾಟ ನಡೆಸಿದಾಗ ಮಗು ಎರಡು ಪೈಪ್‍ಗಳ ಮಧ್ಯೆ ಸಿಲುಕಿರೋದನ್ನು ಗಮನಿಸಿದ್ದಾರೆ. ಕೂಡಲೇ ಮಗುವನ್ನು ಎತ್ತಿಕೊಂಡ ಅದರ ಮೇಲೆ ಬಿದ್ದಿದ್ದ ಮಣ್ಣು ಹಾಗೂ ಹುಳುಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ.
https://twitter.com/umasudhir/status/1029907964348444672
ಗೀತಾ ಅವರು ಮಗುವಿನ ಕೊರಳಿಗೆ ಸುತ್ತಿದ್ದ ಕರಳು ಬಳ್ಳಿಯನ್ನು ಸಡಿಲಿಸಿ, ಬಿಸಿ ನೀರಿನಿಂದ ಸ್ನಾನ ಮಾಡಿಸಿದ್ದಾರೆ. ಬಳಿಕ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಸಿಕ್ಕಿರುವ ಮಗುವಿಗೆ ‘ಸುಥಂತಿಂ’ (ಸ್ವಾತಂತ್ರ್ಯ) ಎಂದು ನಾಮಕರಣ ಮಾಡಲಾಗಿದೆ.
ಮಗುವನ್ನು ಯಾರು ಚರಂಡಿಯಲ್ಲಿ ಬಿಟ್ಟು ಹೋಗಿದ್ದು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಲಾಗುತ್ತಿದೆ.

Leave a Reply