3 ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ: ಕಸದ ರಾಶಿಯಲ್ಲಿ ಸಿಕ್ತು ಶವ

ಚೆನ್ನೈ: 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಮಗುವಿನ ಮೃತದೇಹ ಕಸದ ರಾಶಿಯಲ್ಲಿ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಭಾನುವಾರ ಮಧ್ಯಾಹ್ನ ಇಲ್ಲಿನ ತಿರುವೊಟ್ಟಿಯೂರ್ ಬಳಿ ಇರುವ ಡಂಪಿಂಗ್ ಯಾರ್ಡ್‍ನಲ್ಲಿ ಕಾರ್ಮಿಕರು ಕಸವನ್ನು ಸುರಿಯುತ್ತಿದ್ದ ವೇಳೆ ಮಗುವಿನ ಮೃತದೇಹ ಪತ್ತೆಯಾಗಿದೆ.

ಶನಿವಾರ ಮಧ್ಯಾಹ್ನ ಮಗು ತನ್ನ 5 ವರ್ಷದ ಅಣ್ಣನೊಂದಿಗೆ ಆಟವಾಡುತ್ತಿತ್ತು. ಮಗುವಿನ ತಾಯಿ ಜ್ವರದಿಂದ ಮಲಗಿದ್ದರು ಹಾಗೂ ತಂದೆ ಕೆಲಸಕ್ಕೆ ಹೋಗಿದ್ದರು. 3 ಗಂಟೆಯ ನಂತರ ತಾಯಿ ನಿದ್ದೆಯಿಂದ ಎದ್ದು ಹುಡುಕಾಡಿದಾಗ ಬಾಲಕಿ ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಎರ್ನಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವನ್ನು ಹುಡುಕಲು ಪೊಲೀಸರು ಪ್ರಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕಸದ ರಾಶಿಯಲ್ಲಿ ಮಗುವಿನ ಶವ ಕಂಡು ಕೆಲಸಗಾರರು ತಿರುವಟ್ಟೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ನಂತರ ಪೋಷಕರು ಬಂದು ಮಗುವಿನ ಗುರುತು ಪತ್ತೆ ಹಚ್ಚಿದ್ದು, ಈ ಶವ ಎರ್ನಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಬಾಲಕಿಯದ್ದೇ ಎಂದು ಖಚಿತವಾಯಿತು.

ನಂತರ ಇಲ್ಲಿನ ಸರ್ಕಾರಿ ಸ್ಟ್ಯಾನ್ಲಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಬಾಲಕಿಯ ನೆರಮನೆಯ ವ್ಯಕ್ತಿಯೇ ಈ ಕೃತ್ಯವೆಸಗಿರಬಹುದು ಎಂಬ ಶಂಕೆಯ ಮೇಲೆ ಪೊಲಿಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯ ನಿವಾಸಿಗಳು ಎರ್ನಾವೂರ್ ಪೊಲೀಸ್ ಠಾಣೆಗೆ ಮತ್ತಿಗೆ ಹಾಕಿ ದುಷ್ಕರ್ಮಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.

Comments

Leave a Reply

Your email address will not be published. Required fields are marked *