ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

ಕೇಪ್‍ಟೌನ್: ಚಿರತೆಯೊಂದು ಸಫಾರಿಗೆ ಬಂದಿದ್ದ ಪ್ರವಾಸಿಗನ ಜೀಪ್ ಒಳಗಡೆ ನುಗ್ಗಿ ಕುಳಿತಿದ್ದು, ಪ್ರವಾಸಿಗ ಬೆಚ್ಚಿಬಿದ್ದ ಘಟನೆ ಆಫ್ರಿಕಾದಲ್ಲಿ ನಡೆದಿದೆ.

ಅಫ್ರಿಕಾದ ಸಿರೆನ್ಗಟಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ನಾಲ್ಕು ಪ್ರವಾಸಿಗರಿದ್ದ ವಾಹನವೊಂದು ಸಫಾರಿಗೆ ತೆರಳಿತ್ತು. ಈ ವೇಳೆ ಮಾರ್ಗ ಮಧ್ಯೆ ಆನೇಕ ವನ್ಯಜೀವಿಗಳನ್ನು ಕಂಡು ರೋಮಾಂಚನಗೊಂಡಿದ್ದ ಪ್ರವಾಸಿಗರಿಗೆ ಚಿರತೆಯೊಂದು ಎದುರಾಗಿದೆ.

ಅಮೇರಿಕದ ಪ್ರವಾಸಿ ಬ್ರಿಟನ್ ಹಯೆಸ್ ತಂಡ ಸಫಾರಿಗೆಂದು ಕಾಡಿಗೆ ಹೋಗಿದ್ದ ವೇಳೆ ಮೂರು ಚಿರತೆಗಳು ಮುಂದೆ ಬಂದವು. ಅದರಲ್ಲಿ ಚಿರತೆಯೊಂದು ಜೀಪ್ ಹತ್ತಿರ ಬಂದಿದೆ. ಚಿರತೆ ಕಂಡಾಕ್ಷಣ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಕೂಡಲೇ ಚಿರತೆ ವಾಹನದೊಳಗೆ ನುಗ್ಗಿಯೇ ಬಿಟ್ಟಿದೆ.

ಇದರಿಂದಾಗಿ ಪ್ರವಾಸಿಗರು ಮತ್ತಷ್ಟು ಗಾಬರಿಗೊಳಗಾಗಿದ್ದಾರೆ. ವಾಹನ ಏರಿದ್ದ ಚಿರತೆ ಖಾಲಿ ಇದ್ದ ಸೀಟನ್ನು ನೆಕ್ಕಿದ್ದಲ್ಲದೇ, ಟಾಪ್ ಗ್ಲಾಸಿಗೂ ಮೂತಿ ಉಜ್ಜಿದೆ. ಕೆಲ ಹೊತ್ತಿನ ಬಳಿಕ ವಾಹನದಿಂದ ಇಳಿದು ಹೋಗಿದೆ. ಬದುಕಿದೆಯಾ ಬಡಜೀವವೇ ಅಂತ ಇತ್ತ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ.

ಇದೀಗ ಈ ವಿಡಿಯೋವನ್ನು ಪ್ರವಾಸಿಗ ತಮ್ಮ ಫೇಸ್‍ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು, ಆ ಕ್ಷಣದಲ್ಲಿ ಆದ ಅನುಭವನ್ನು ಹಂಚಿಕೊಂಡಿದ್ದಾರೆ.

https://www.facebook.com/EJKOMO/videos/1721927467866774/

Comments

Leave a Reply

Your email address will not be published. Required fields are marked *