ಹಾವೇರಿ: ಚಿರತೆ ಮರಿಯೊಂದು ಮನೆಯೊಳಗೆ ನುಗ್ಗಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಮಾಲತೇಶ ಬೆಳೋಡಿ ಎಂಬವರ ಮನೆಯೊಳಗೆ ಈ ಚಿರತೆ ಮರಿ ಸೇರಿಕೊಂಡಿತ್ತು. ಮನೆಯ ಒಳಗಡೆಯ ಮಂಚದ ಕೆಳಗೆ ಕೆಲ ಕಾಲ ಅವಿತಿದ್ದ ಈ ಮರಿಯನ್ನು ಕಂಡು ಮನೆಯ ಕುಟುಂಬ ಸದಸ್ಯರು ಹೊರಗೆ ಓಡಿ ಬಂದು ಮನೆಯ ಬಾಗಿಲು ಹಾಕಿದ್ರು.
ಚಿರತೆ ಮರಿ ಮನೆಗೆ ನುಗ್ಗಿರೋದನ್ನು ಕಂಡು ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಸ್ಥಳೀಯರ ಸಹಾಯ ಪಡೆದು ಚಿರತೆ ಮರಿ ಸೆರೆ ಹಿಡಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮದ ಬಳಿ ಬರೋ ಚಿರತೆಗಳನ್ನ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಬೇಕು ಎಂದು ಆಗ್ರಹಿಸಿದ್ದಾರೆ.



Leave a Reply