ಚಿತ್ರದುರ್ಗ: ಬೇಟೆಗಾರರು ಅರಣ್ಯಪ್ರದೇಶದಲ್ಲಿ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಚಿರತೆ ಸೇರಿದಂತೆ ಮೂರು ಪ್ರಾಣಿಗಳು ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲೆಯ ಹೊಸದುರ್ಗ ತಾಲೂಕಿನ ಕಪ್ಪನಾಯಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ 5 ವರ್ಷದ ಗಂಡು ಚಿರತೆ, 3 ವರ್ಷದ ಹೆಣ್ಣು ಕರಡಿ, ಹಾಗೂ ಮುಳ್ಳುಹಂದಿ ಸಾವನ್ನಪ್ಪಿವೆ. ಈ ಮೂರು ಪ್ರಾಣಿಗಳು ಏಕಕಾಲದಲ್ಲಿ ಸಾವನ್ನಪ್ಪಿರುವುದರಿಂದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಎರಡು ಮೂರು ದಿನಗಳ ಹಿಂದೆಯೇ ತಂತಿ ಬೇಲಿಯ ವಿದ್ಯುತ್ ಶಾಕ್‍ನಿಂದ ಪ್ರಾಣಿಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Leave a Reply