ಚೆಕ್ ಬೌನ್ಸ್ ಪ್ರಕರಣ- ದೋಷಿಗೆ ಜೈಲು ಶಿಕ್ಷೆ

ಶಿವಮೊಗ್ಗ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗೆ 1.51 ಲಕ್ಷ ರೂ. ದಂಡ ಮತ್ತು 9 ತಿಂಗಳು ಜೈಲು ಶಿಕ್ಷೆ ವಿಧಿಸಿ ಹೊಸನಗರ ಜೆಎಂಎಫ್‍ಸಿ ನ್ಯಾಯಾಲಯ ತೀರ್ಪು ನೀಡಿದೆ.

ಪಟ್ಟಣ ವ್ಯಾಪ್ತಿಯ ಪಿ.ಆರ್.ಸಂಜೀವ್ ಅವರಿಂದ ಬಾಳಚಿಕ್ಕ ಗ್ರಾಮದ ವೀರೇಶ್ 1 ಲಕ್ಷ ರೂ. ಗಳನ್ನು ಕೈಗಡವಾಗಿ ಪಡೆದಿದ್ದ. ಅಲ್ಲದೆ ಹಣ ತಿಳುವಳಿಗಾಗಿ ಬ್ಯಾಂಕ್ ಚೆಕ್ ನೀಡಿದ್ದ. ಅದರೆ ಚೆಕ್ ಹಾಕಿದ ಸಂದರ್ಭದಲ್ಲಿ ವೀರೇಶ್ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ ಚೆಕ್ ಬೌನ್ಸ್ ಆಗಿತ್ತು. ವೀರೇಶ್ ವಿರುದ್ಧ ಸಂಜೀವ್ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ, ವೀರೇಶ್‍ಗೆ 9 ತಿಂಗಳು ಸಾದಾ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ದೋಷಿ ವಿರೇಶ್, ಪಿ.ಆರ್. ಸಂಜೀವ್ ಅವರಿಗೆ 1.46 ಲಕ್ಷ ರೂ. ಹಾಗೂ ಸರ್ಕಾರಕ್ಕೆ 5 ಸಾವಿರ ರೂ. ಹಣ ನೀಡುವಂತೆ ಸೂಚಿಸಿ ತೀರ್ಪು ಪ್ರಕಟಿಸಿದೆ. ಅಲ್ಲದೆ ಹಣ ಕಟ್ಟಲು ವಿಫಲವಾದಲ್ಲಿ ಪುನಃ 3 ತಿಂಗಳು ಹೆಚ್ಚುವರಿ ಶಿಕ್ಷೆಯ ಆದೇಶವನ್ನು ನೀಡಿದ್ದಾರೆ.

Comments

Leave a Reply

Your email address will not be published. Required fields are marked *