ಸಿನಿಮಾ ಆಡಿಷನ್ ವಿಚಾರದಲ್ಲಿ ಯುವತಿಯರಿಗೆ ಮೋಸ: ಕಹಿ ಘಟನೆ ಹಂಚಿಕೊಂಡ ನಟ ಎಂ.ಕೆ.ಮಠ

ತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಧಾರಾವಾಹಿ ಆಡಿಷನ್ ವಿಚಾರಲ್ಲಿ ಭಾರೀ ಮೋಸಗಳು ನಡೆಯುತ್ತಿರುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹಣ ಮಾಡುವುದಕ್ಕಾಗಿ ಮತ್ತು ಹುಡುಗಿಯರ ಸಂಗ ಬಯಸುವುದಕ್ಕಾಗಿಯೇ ಕೆಲ ಗುಂಪುಗಳು  ನಿರಂತರವಾಗಿ ಆಡಿಷನ್ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿವೆ ಎಂದು ಹಿರಿಯ ನಟ ಎಂ.ಕೆ.ಮಠ ಬಹಿರಂಗ ಹೇಳಿಕೆ ನೀಡಿದ್ದಾರೆ.

ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಂ.ಕೆ.ಮಠ, “ಕೆಲ ದಿನಗಳ ಹಿಂದೆ ಉತ್ತರ ಕರ್ನಾಟಕದ ಹುಡುಗಿಯೊಬ್ಬಳು ನನಗೆ ಕರೆ ಮಾಡಿ, ಆಡಿಷನ್ ಗೆ ಕರೆದಿದ್ದಾರೆ ಎಂದಳು. ಅಲ್ಲದೇ ಒಬ್ಬಳೇ ಬರುವಂತೆ ಹೇಳಿದ್ದಾರೆ ಎಂದೂ ತಿಳಿಸಿದಳು. ಒಬ್ಬಳನ್ನೇ ಕರೆದಿದ್ದಾರೆ ಅಂದರೆ ಅಲ್ಲಿ ಏನೋ ಮೋಸ ಇದೆ ಎಂದು ಅರಿತುಕೊಂಡೆ. ಅವರ ವಿಳಾಸ ಕಳುಹಿಸುವಂತೆ ಆ ಹುಡುಗಿಯನ್ನು ಕೇಳಿದೆ. ಆದರೆ ಅವರು ವಿಳಾಸ ಕೊಟ್ಟಿರಲಿಲ್ಲ. ಮತ್ತೊಂದು ಸಲ ಆ ಗುಂಪಿನಿಂದ ಕರೆ ಬಂದರೆ, ನಾನು ಎಂ.ಕೆ.ಮಠ ಅವರ ಮಗಳು ಅಂತ ಹೇಳುವುದಕ್ಕೆ ಆ ಹುಡುಗಿಗೆ ಹೇಳಿದೆ. ಅವರು ಕಾಲ್ ಮಾಡಿದಾಗ ಆ ಹುಡುಗಿ ನನ್ನ ಹೆಸರು ಹೇಳಿದ್ದಾಳೆ. ನಂತರ ಆ ಗುಂಪಿನಿಂದ ಅವಳಿಗೆ ಕರೆ ಬಂದಿಲ್ಲ” ಎಂದಿದ್ದಾರೆ.  ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

ಆ ಹುಡುಗಿ ನನಗೆ ವಿಷಯ ತಿಳಿಸದೇ ಹಾಗೆಯೇ ಹೋಗಿದ್ದರೆ, ಪಾಪ  ಆ ಹುಡುಗಿಗೆ ಅದೇನು ಅನಾಹುತ ಆಗುತ್ತಿತ್ತೋ ಎಂದು ಆತಂಕ ವ್ಯಕ್ತ ಪಡಿಸುತ್ತಾರೆ ಮಠ. ಹಾಗಾಗಿ ಆಡಿಷನ್ ಹೆಸರಿನಲ್ಲಿ ಮೋಸ ಮಾಡಿದವರನ್ನು ಹಿಡಿದು ಹೆಡೆಮುರಿ ಕಟ್ಟಬೇಕು ಎನ್ನುವುದು ಅವರ ಆಗ್ರಹ. ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಗತ್ಯ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *