ಬಿಜೆಪಿ ನನಗೆ ದ್ರೋಹ ಮಾಡಿದೆ: ಚಿರಾಗ್ ಪಾಸ್ವಾನ್

ನವದೆಹಲಿ: ಎಲ್‍ಜೆಪಿ ಸಂಸದ ಚಿರಾಗ್ ಪಾಸ್ವಾನ್ ಬಿಜೆಪಿ ನನಗೆ ದ್ರೋಹ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕಾರಣವೇನು?: ದೆಹಲಿಯ 12 ಜನಪಥ್ ರಸ್ತೆಯಲ್ಲಿರುವ ಬಂಗಲೆಯನ್ನು ನನ್ನ ತಂದೆಗೆ ನೀಡಿದ್ದಾಗಿತ್ತು, ಬಂಗಲೆಯಲ್ಲಿರಲು ನಾನು ಅರ್ಹನಾಗಿರಲಿಲ್ಲ. ಹೀಗಾಗಿ ಬಂಗಲೆಯನ್ನ ನಾನೇ ಖಾಲಿ ಮಾಡಲು ನಿರ್ಧರಿಸಿದ್ದೆ. ಆದರೆ ನನ್ನ ಕುಟುಂಬವನ್ನು ಹೊರಹಾಕಿ, ಅವಮಾನಿಸಿದ್ದು ಇದರಿಂದ ನಮಗೆ ಮೋಸವಾಗಿದೆ ಎಂದು ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿದರು. ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಚಿರಾಗ್ ಪಾಸ್ವಾನ್ ಹೇಳಿದ್ದೇನು?: ಸರ್ಕಾರಕ್ಕೆ ಸೇರಿದ ಯಾವ ಸೌಕರ್ಯವೂ ಶಾಶ್ವತವಾಗಿರಲು ಸಾಧ್ಯವಿಲ್ಲ ಮತ್ತು ಅದನ್ನು ನಮ್ಮ ಸ್ವಂತದ್ದೆಂದು ನಾವು ಎಂದಿಗೂ ಹೇಳಿಕೊಳ್ಳಲು ಸಾಧ್ಯವಿಲ್ಲ. ಇಷ್ಟು ವರ್ಷಗಳ ಕಾಲ ಇಲ್ಲಿ ಉಳಿಯಲು ನಾನು ಅದೃಷ್ಟಶಾಲಿಯಾಗಿದ್ದೆ. ನನ್ನ ತಂದೆ ಇಲ್ಲಿ ಸುದೀರ್ಘ ಕಾಲದವರೆಗೆ ಇದ್ದು ರಾಜಕೀಯದಲ್ಲಿ ಪ್ರಗತಿ ಸಾಧಿಸಿದ್ರು. ಈ ಮನೆ ಪ್ರಾಯೋಗಿಕವಾಗಿ ಸಾಮಾಜಿಕ ನ್ಯಾಯದ ಜನ್ಮಸ್ಥಳವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂಗಳನ್ನು ಗುತ್ತಿಗೆ ಪಡೆಯಲು ಬಿಜೆಪಿಗೆ ಸಾಧ್ಯವಿಲ್ಲ: ಕೆ.ಎಂ.ಗಣೇಶ್

ಮನೆಯನ್ನು ಕಳೆದುಕೊಂಡ ಬಗ್ಗೆ ನನಗೆ ಬೇಸರವಿಲ್ಲ. ಅದು ಎಂದಾದರೂ ಹೋಗುತ್ತಿತ್ತು. ಆದರೆ ಅಲ್ಲಿಂದ ನನ್ನನ್ನು ತೆರವುಗೊಳಿಸಿದ ರೀತಿಯನ್ನು ನಾನು ವಿರೋಧಿಸುತ್ತೇನೆ. ಬಂಗಲೆ ತೆರವು ಮಾಡಲು ಮಾರ್ಚ್ 20ರ ಗಡುವು ಇತ್ತು. ಅದರ ಹಿಂದಿನ ದಿನವೇ ಹೊರಡಲು ನಾನು ಸಿದ್ಧನಾಗಿದ್ದೆ. ಮನೆಯಿಂದ ಹೊರಗೆ ಹೋಗದಂತೆ ತಡೆದು ಆಶ್ವಾಸನೆ ಕೊಟ್ಟಿದ್ದೇಕೆ ಎಂದು ಗೊತ್ತಾಗುತ್ತಿಲ್ಲ. ಅವರು ನನ್ನ ತಂದೆಯ ಫೋಟೋವನ್ನು ಎಸೆದರು, ಅವು ನಮ್ಮ ಅಚ್ಚುಮೆಚ್ಚಿನ ಫೋಟೋಗಳು. ಚಪ್ಪಲಿ ಕಾಲಿನೊಂದಿಗೆ ಫೋಟೋಗಳನ್ನು ತುಳಿದರು. ಈ ವರ್ಷ ನೀವು ಪದ್ಮಭೂಷಣ ನೀಡಿದವರಿಗೆ ಈ ರೀತಿಯ ಅವಮಾನ ಮಾಡುವ ಮೂಲಕ ಅವರ ಸ್ಮರಣೆಯನ್ನು ಅವಮಾನಿಸಿದಿರಿ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *