ಕೈಕೊಟ್ಟ ಪ್ರಿಯತಮ- ನಡುರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ಯುವತಿ ರಂಪಾಟ

ನಾರಿ ಮುನಿದರೆ ಮಾರಿ ಎಂಬ ಗಾದೆಯೊಂದಿದೆ. ಈ ಗಾದೆಯಂತೆ ಪ್ರೀತಿಯ ವಂಚನೆಗೊಳಗಾಗಿ (Love Failure) ಯುವತಿಯೊಬ್ಬಳು ರೊಚ್ಚಿಗೆದ್ದು ನಡುರಸ್ತೆಯಲ್ಲಿಯೇ ರಂಪ ರಾಮಾಯಣ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು. ಯುವಕನೊಬ್ಬನನ್ನು ಯುವತಿ ಪ್ರೀತಿಸುತ್ತಿದ್ದಳು. ಆದರೆ ಆತ ಈಕೆಗೆ ವಂಚಿಸಿದ್ದಾನೆ. ಇದರಿಂದ ಯುವತಿ ಮಾನಸಿಕವಾಗಿ ನೊಂದಿದ್ದಾಳೆ. ಅಲ್ಲದೆ ಅದೇ ಫೀಲಿಂಗ್‍ನಿಂದ ತಲೆಕೆಟ್ಟು ನಡು ರಸ್ತೆಯಲ್ಲಿಯೇ ರಂಪಾಟ ಮಾಡಿದ್ದಾಳೆ.

ರಸ್ತೆ ತುಂಬಾ ಓಡಾಡುತ್ತಾ ಸಿಕ್ಕ ಸಿಕ್ಕ ಕಾರುಗಳ ಮೇಲೆ ಹತ್ತಿ ಕುಳಿತು ದುರ್ವರ್ತನೆ ತೋರಿದ್ದಾಳೆ. ಅಲ್ಲದೆ ಬ್ಯಾರಿಕೇಡ್‍ಗಳನ್ನು ಬೀಳಿಸಿದ್ದಾಳೆ. ಹೀಗೆ ನಡುರೋಡಿನಲ್ಲೇ ಬೇಕಾಬಿಟ್ಟಿಯಾಗಿ ವರ್ತಿಸಿ ಕೆಲ ಕಾಲ ಆತಂಕ ಸೃಷ್ಠಿಸಿದ್ದಾಳೆ. ನಂತರ ಸ್ಥಳೀಯರು ಆಕೆಯನ್ನು ಹಿಡಿದು ರಸ್ತೆ ಬದಿಯಲ್ಲಿ ಕೂರಿಸಿ ಬುದ್ಧಿ ಹೇಳಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ಯುವತಿಯ ಕಣ್ಣು, ನಡವಳಿಕೆ ಮತ್ತು ಭಾಷೆ ನೋಡಿದರೆ ಆಕೆ ಸಂಪೂರ್ಣವಾಗಿ ಮಾನಸಿಕ ತಳಮಳ ಅಥವಾ ಗೊಂದಲಕ್ಕೀಡಾಗಿರುವುದು ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವೆಸಗಿ ಚಿನ್ನಾಭರಣ ಕದ್ದು ಪರಾರಿ – ಮಹಿಳೆ ಸೇರಿ ಐವರ ವಿರುದ್ಧ ಕೇಸ್

ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಯುವತಿಯ ವೀಡಿಯೋವನ್ನು ವಿಕಾಸ್‌ ಕುಮಾರ್‌ ಎಂಬ ಟ್ವಿಟ್ಟರ್‌ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲದಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಒಟ್ಟಿನಲ್ಲಿ ಒಬ್ಬ ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿಯಾಗಿ ವರ್ತಿಸುವುದನ್ನು ನೋಡುವುದು ತುಂಬಾ ದುಃಖಕರವಾಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ.