ಲೋಕಾಯುಕ್ತ ದಾಳಿ ವೇಳೆ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 6 ಕೋಟಿ!

ಬೆಂಗಳೂರು: ಬಿಜೆಪಿ ಶಾಸಕ ವಿರೂಪಾಕ್ಷಪ್ಪ (Madal Virupakshappa) ಅವರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ (Lokayukta Raid) ಮಾಡಿದ್ದು, ಇದುವರೆಗೆ ಪ್ರಶಾಂತ್ ಮಾಡಾಳ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ಸೀಜ್ (Money Seieze) ಮಾಡಲಾಗಿದೆ.

ಗುರುವಾರ ರಾತ್ರಿಯಿಂದಲೇ ಪ್ರಶಾಂತ್ (V Prashant Madal) ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಬರೋಬ್ಬರಿ 6 ಕೋಟಿ ಬೇಟೆಯಾಡಿದ್ದು, ಪ್ರಶಾಂತ್ ಮಾಡಾಳ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದ್ದು, ಇವರ ಬಳಿ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪ್ರಶಾಂತ್ ಮಾಡಾಳ್ ಈ ಬಗ್ಗೆ ಏನನ್ನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.

ಇನ್ನು ಕ್ರೆಸೆಂಟ್ ರಸ್ತೆಯ ಕಚೇರಿ ಹಾಗೂ ಸಂಜಯನಗರದ ಮನೆಯಲ್ಲಿಯೂ ಹಣ ಪತ್ತೆಯಾಗಿದೆ. ಕೆಎಸ್ಡಿಎಲ್ ಎಂಡಿ ಮನೆಯ ಮೇಲೆ ಕೂಡ ದಾಳಿ ಮಾಡಿರುವ ಲೋಕಾ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: 40 ಲಕ್ಷ ಲಂಚ ಅಲ್ಲ ಸಿಕ್ಕಿದ್ದು 1.62 ಕೋಟಿ – ಬಿಜೆಪಿ ಶಾಸಕನ ಪುತ್ರನ ಜೊತೆ ಐವರು ಅರೆಸ್ಟ್

ಸದ್ಯ ಪ್ರಶಾಂತ್ ಮಾಡಾಳ್ ಅರೆಸ್ಟ್ ನಿಂದ ಅಪ್ಪನಿಗೆ ಕಂಟಕ ಸಾಧ್ಯತೆ ಇದೆ. ಈ ಸಂಬಂಧ ವಿರೂಪಾಕ್ಷಪ್ಪ ಮಾಡಾಳ್ ಗೂ ತನಿಖೆ ಬಿಸಿ ತಟ್ಟಿದ್ದು, ನೋಟಿಸ್ ಕೊಟ್ಟು ಶಾಸಕರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ.

Comments

Leave a Reply

Your email address will not be published. Required fields are marked *