ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಗುದ್ದಾಟ ಮುಂದುವರಿದಿದೆ. ಸಿದ್ದರಾಮಯ್ಯ ಕಾಲದಲ್ಲಿ ನೇಮಕ ಮಾಡಿದ್ದ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದು ಮಾಡಿರುವುದನ್ನು ಸಚಿವ ಜಿಟಿ ದೇವೇಗೌಡ ಮತ್ತೆ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಬಂದರು ಹಿಂದಿನ ಸರ್ಕಾರದ ನೇಮಕಾತಿ ರದ್ದು ಮಾಡಲಾಗುತ್ತದೆ. ಹೀಗಾಗಿ ನಾನು ಅದನ್ನೇ ಮಾಡಿದ್ದೇನೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಬಿಜೆಪಿ ಅವಧಿಯ ಸದಸ್ಯರ ನೇಮಕ ಮಾಡಿ 6 ತಿಂಗಳು ಮಾತ್ರ ಕಳೆದಿದ್ದರು ರದ್ದು ಮಾಡಿದ್ದರು ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

ಹಿಂದಿನ ಸರ್ಕಾರದಲ್ಲಿ ಅರ್ಹತೆ ಇಲ್ಲದವರನ್ನು ಸಿಂಡಿಕೇಟ್, ಅಕಾಡೆಮಿಕ್ ಸದಸ್ಯರಾಗಿ ನೇಮಕ ಮಾಡಲಾಗಿದೆ. ನಮ್ಮ ಸರ್ಕಾರದಲ್ಲಿ ಹೀಗೆ ಆಗುವುದಿಲ್ಲ. ಈ ಹುದ್ದೆಗೆ ಅರ್ಹತೆ ಇರುವವರನ್ನು ನೇಮಕ ಮಾಡಲಾಗುತ್ತೆ. ಇದರಲ್ಲಿ ರಾಜಕೀಯ ಮಧ್ಯಪ್ರವೇಶ ಮಾಡುವುದನ್ನ ತಡೆಯಲಾಗುವುದು. ತಜ್ಞರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ಮಾಜಿ ಸಿಎಂಗೆ ಮತ್ತೊಮ್ಮೆ ಚಾಟಿ ಬೀಸಿದರು. ಇನ್ನು ವಿವಿಧ ವಿಶ್ವವಿಶ್ವದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಸಮಿತಿ ರಚಿಸಿ ಈ ಸಮಿತಿ ನೀಡಿದ ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುತ್ತದೆ. ಈ ಬಳಿಕ ನಿಯಮಗಳ ಪ್ರಕಾರ ಕುಲಪತಿಗಳ ನೇಮಕ ಮಾಡಲಾಗುತ್ತದ ಎಂದರು.

Leave a Reply