ಚಂದ್ರಯಾನ-3 ಭಾರತದ ಭರವಸೆ, ಕನಸುಗಳನ್ನ ಹೊತ್ತೊಯ್ಯಲಿದೆ – ಪ್ರಧಾನಿ ಶುಭಹಾರೈಕೆ

ನವದೆಹಲಿ: ಚಂದ್ರನ (Mission Moon) ಮೇಲೆ ಗಗನನೌಕೆ ಇಳಿಸಿ ಅಧ್ಯಯನ ಮಾಡುವ ಉದ್ದೇಶದ ಚಂದ್ರಯಾನ-3 (Chandrayaan-3) ಕಾರ್ಯಕ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಚಂದ್ರಯಾನ-3 ಉಡಾವಣೆ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಭಹಾರೈಸಿದ್ದಾರೆ.

ಚಂದ್ರಯಾನ-3 ಕುರಿತು ಟ್ವೀಟ್‌ ಮಾಡಿರುವ ಮೋದಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ರ ಜುಲೈ 14 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಿದೆ. ಚಂದ್ರಯಾನ-3 ನಮ್ಮ ಮೂರನೇ ಚಂದ್ರಯಾನ. ಅದರ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದ 1 ನಿರ್ಧಾರ – ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬಿಯಾದ ಭಾರತ

ಆಂಧ್ರಪ್ರದೇಶದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಲ್ಯಾಂಡರ್‌, ರೋವರ್‌ ಹೊತ್ತ ರಾಕೆಟ್‌ ಇಂದು (ಶುಕ್ರವಾರ) ಮಧ್ಯಾಹ್ನ 2:35 ಕ್ಕೆ ನಭಕ್ಕೆ ಹಾರಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಸಿದ್ಧತೆ ಪೂರ್ಣಗೊಳಿಸಿದೆ. ಇದನ್ನೂ ಓದಿ: ದೇಶವೇ ಎದುರು ನೋಡುತ್ತಿರೋ ಚಂದ್ರಯಾನ-3ಗೆ ಬೆಳಗಾವಿಯ ಯುವ ವಿಜ್ಞಾನಿಯ ಕೊಡುಗೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]