8 ಅಡಿ ಎತ್ತರ, 10.2 ಅಡಿ ಉದ್ದದ ಸೈಕಲ್ ತಯಾರಿಸಿ ಲಿಮ್ಕಾ ದಾಖಲೆ ನಿರ್ಮಾಣ

ಚಂಡೀಗಢ: ನಾವೆಲ್ಲಾ ಸಣ್ಣ ಸೈಕಲ್ ನೋಡಿದ್ದೇವೆ. ಸವಾರಿ ಕೂಡ ಮಾಡಿದ್ದೇವೆ. ಆದರೆ ಪಂಜಾಬಿನ ವ್ಯಕ್ತಿಯೊಬ್ಬರು ಆನೆ ಗಾತ್ರದ ಸೈಕಲ್ ನಿರ್ಮಾಣ ಮಾಡಿ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ.

ರಾಜೀವ್ ಕುಮಾರ್ ಪಂಜಾಬಿನ ಚಂಡೀಗಢ ನಗರದ ನಿವಾಸಿ. ಇವರು ಆನೆ ಗಾತ್ರದ ಸೈಕಲ್‍ವೊಂದನ್ನು ಸಿದ್ಧಪಡಿಸಿದ್ದು, ಸುಮಾರು 8 ಅಡಿ ಎತ್ತರ ಹಾಗೂ 10.2 ಅಡಿ ಉದ್ದವನ್ನು ಹೊಂದುವ ಮೂಲಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಿದೆ.

ರಾಜೀವ್ ಕುಮಾರ್ ಶಾಲಾ ದಿನಗಳಿಂದಲೂ ಸೈಕಲ್ ಮೇಲೆ ತುಂಬಾ ಒಲವು ಹೊಂದಿದ್ದರು. ಅಂತೆಯೇ ವಿಭಿನ್ನ ಹಾಗೂ ಅಪರೂಪದ ಸೈಕಲ್ ತಯಾರಿಸಲು ರಾಜೀವ್ ಚಿಂತನೆ ನಡೆಸಿದ್ದರು. ನಂತರ 2013 ರಲ್ಲಿ ತಮ್ಮ ಪಾಕೆಟ್ ಮನಿಯಲ್ಲಿ ಸುಮಾರು 1 ಲಕ್ಷ ರೂ. ಖರ್ಚು ಮಾಡಿ ಒಂದು ದೊಡ್ಡ ಗ್ರಾತದ ಸೈಕಲ್ ಸಿದ್ಧಪಡಿಸಿದ್ದಾರೆ.

ವಿಭಿನ್ನ ರೀತಿಯಲ್ಲಿ ಬೈಸಿಕಲ್ ತಯಾರಿಸುವುದು ಮತ್ತು ಅದರ ಮೇಲೆ ಸವಾರಿ ಮಾಡುವುದರ ಬಗ್ಗೆ ತುಂಬಾ ಆಸಕ್ತಿ ಹೊಂದಿರುವ ರಾಜೀವ್ ಈಗ ಈ ಬೈಸಿಕಲ್ ಓಡಿಸುವುದರ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಅದರಲ್ಲೂ ಮಕ್ಕಳು ತುಂಬಾ ಇಷ್ಟ ಪಟ್ಟಿದ್ದಾರೆ.

ರಾಜೀವ್ ಮೊದಲಿಗೆ 7 ಅಡಿ ಎತ್ತರದ ಸೈಕಲ್ ಮೇಲೆ ಕುಳಿತು ಚಂಡೀಘಡ್‍ನಿಂದ ದೆಹಲಿವರೆಗೂ ಸುಮಾರು 250 ಕಿ.ಮೀ. ಸವಾರಿ ಮಾಡಿದ್ದಾರೆ. ಇವರಿಗೆ ಇದೊಂದು ಬಹು ದೊಡ್ಡ ಸವಲಾಗಿತ್ತು. ಈಗ ಈ ಸೈಕಲ್‍ನಿಂದ ಚಂಡೀಗಢದಿಂದ ಮುಂಬೈವರೆಗೆ ಸುಮಾರು 1,650 ಕಿ.ಮೀ ದೂರವನ್ನು ಕ್ರಮಿಸಿ ಗಿನ್ನಿಸ್ ದಾಖಲೆ ನಿರ್ಮಿಸುವ ಯತ್ನದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *