ನವೀನ್ ವ್ಯಕ್ತಿತ್ವ ಪ್ರಶಂಸಿಸಿದ ಚಂದನವನದ ಮೋಹಕತಾರೆ

ಮೋಹಕತಾರೆ ರಮ್ಯಾ ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಶೇಖರಪ್ಪ ವ್ಯಕ್ತಿತ್ವದ ಬಗ್ಗೆ ಪ್ರಶಂಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ನಿನ್ನೆ ನವೀನ್ ಶೇಖರಪ್ಪ ಉಕ್ರೇನ್-ರಷ್ಯಾ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಚಂದನವನ ಸೇರಿದಂತೆ ಅನೇಕ ಗಣ್ಯರು ನವೀನ್ ಸಾವಿನ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಇನ್‍ಸ್ಟಾಗ್ರಾಮ್ ನಲ್ಲಿ ರಮ್ಯಾ ಅವರು ನವೀನ್ ತನ್ನ ಸ್ನೇಹಿತನ ಜೊತೆ ಚಾಟ್ ಮಾಡಿದ್ದ ಫೋಟೋ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಗೆ, ಕರ್ನಾಟಕದ ಹಾವೇರಿಯ 21 ವರ್ಷ ವಯಸ್ಸಿನ ನವೀನ್ ಶೇಖರಪ್ಪ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ. ನಿನ್ನೆ ಉಕ್ರೇನ್‍ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅವನು ಮತ್ತು ಅವನ ಸ್ನೇಹಿತರು ದಿನಗಟ್ಟಲೆ ಊಟ ಮತ್ತು ನೀರಿಲ್ಲದೆ ಬಂಕರ್‌ಗಳಲ್ಲಿ ಇದ್ದರು. ನವೀನ್ ಮತ್ತು ಆತನ ಸ್ನೇಹಿತ(ಚಾಟ್‍ನಲ್ಲಿ) ಎಲ್ಲರಿಗೂ ಆಹಾರವನ್ನು ತರಲು ಸ್ವಯಂಪ್ರೇರಿತರಾಗಿ ಹೊರ ಹೋಗಲು ನಿರ್ಧರಿಸಿದ್ದಾರೆ. ಆಹಾರವನ್ನು ತರಬೇಕು ಎಂದು ಹೊರಟಾಗ ನವೀನ್ ಸ್ನೇಹಿತ ಜಾಕೆಟ್ ಧರಿಸಿರಲಿಲ್ಲ. ಉಕ್ರೇನ್ ನಲ್ಲಿ ಹೆಚ್ಚು ಚಳಿಯಾಗಿದ್ದರಿಂದ ನವೀನ್ ತನ್ನ ಸ್ನೇಹಿತನನ್ನು ಬಂಕರ್‍ಗೆ ಹಿಂತಿರುಗಲು ಹೇಳಿದರು. ಅವರು ತನ್ನ ಸ್ನೇಹಿತರಿಗೆ ಆಹಾರವನ್ನು ತರಲು ಕಿರಾಣಿ ಅಂಗಡಿಗೆ ಒಬ್ಬನೇ ಹೋದನು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ನೀಟ್ ವ್ಯವಸ್ಥೆ ಬಡವರ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಮಾಡುತ್ತಿದೆ: ಕುಮಾರಸ್ವಾಮಿ

 

View this post on Instagram

 

A post shared by Ramya/Divya Spandana (@divyaspandana)

ನಮ್ಮೆಲ್ಲರಿಗಿಂತ ಹೆಚ್ಚು ಮಾನವೀಯತೆ ನವೀನ್ ಅವರಲ್ಲಿ ಇತ್ತು. ಅವರು ಬೇರೆಯವರ ಬಗ್ಗೆ ಕಾಳಜಿ ವಹಿಸಿದ್ದರಿಂದ ಅವರೊಬ್ಬರೇ ಹೊರಬಂದರು. ಅವರಿಗೆ ಸಹಾನುಭೂತಿ ಇತ್ತು. ಅವರು ಧೈರ್ಯಶಾಲಿಯಾಗಿದ್ದರು. ಯುದ್ಧದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಆಡಳಿತವು ವೇಗವಾಗಿ ಪ್ರತಿಕ್ರಿಯಿಸದ ಕಾರಣ ಈ ಸಾವು ಸಂಭವಿಸಿದೆ. ಪ್ರಜ್ಞೆಯಿಲ್ಲದ ಯುದ್ಧದಿಂದ ಉಂಟಾದ ಸಾವಿಗೆ ಟ್ರೋಲ್‍ಗಳು ಈ ಹುಡುಗನನ್ನು ದೂಷಿಸುತ್ತಿದೆ. ಅನೇಕ ಜನರ ಜೀವಗಳನ್ನು ಉಳಿಸಿದ ಹುಡುಗನ ಬಗ್ಗೆ ಅವರು ತುಂಬಾ ದ್ವೇಷವನ್ನು ಹೊಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

RAMYA

ಹುಡುಗ ಮೃತಪಟ್ಟ ಕಾರಣ ನಾನು ಈ ಪೋಸ್ಟ್ ಮಾಡುತ್ತಿದ್ದೇನೆ. ಇದರಿಂದ ಅವನ ಸ್ನೇಹಿತರು ಮತ್ತು ಕುಟುಂಬಕ್ಕೆ ಹೆಚ್ಚು ಕಷ್ಟಕೊಡಬೇಡಿ. ಅವರನ್ನು ಶಾಂತಿಯಿಂದ ಇರಲು ಬಿಡಿ. ನವೀನ್ ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಸಹಾನುಭೂತಿ ಮತ್ತು ಪ್ರೀತಿಗೆ ಅರ್ಹರು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬೆಳಗಾವಿ 19 ವಿದ್ಯಾರ್ಥಿಗಳು ಸಿಲುಕಿದ್ದು, ಇಬ್ಬರು ವಾಪಸ್ ಆಗಿದ್ದಾರೆ: ಜಿಲ್ಲಾಧಿಕಾರಿ

ನವೀನ್ ನಮ್ಮನ್ನು ಕ್ಷಮಿಸಿ. ನಾವು ನಿಮ್ಮನ್ನು ಉಳಿಸಿಕೊಳ್ಳಲು ವಿಫಲಗೊಂಡಿದ್ದೇವೆ. ನಿಮ್ಮಿಂದ ನಾವು ತುಂಬಾ ಕಲಿಯ ಬೇಕು. ಜಗತ್ತಿಗೆ ನಿಮ್ಮಂತಹ ವ್ಯಕ್ತಿಗಳು ಹೆಚ್ಚು ಅಗತ್ಯವಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿಕೊಂಡಿದ್ದಾರೆ. ನವೀನ್ ಮತ್ತು ಅವರ ಒಳ್ಳೆಯತನವನ್ನು ಹೇಗೆ ಪ್ರಶಂಸಿಸಬೇಕೆಂದು ನಿಮಗೆ ಸಾಧ್ಯವಾಗದಿದ್ದರೆ ಮತ್ತು ತಿಳಿದಿಲ್ಲದಿದ್ದರೆ ದಯವಿಟ್ಟು ಕಾಮೆಂಟ್ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *