ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು

ಬಿಗ್ ಬಾಸ್ (Bigg Boss Kannada) ಬೆಡಗಿ ನಿವೇದಿತಾ ಗೌಡ (Niveditha Gowda) ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದವರು. ಸದಾ ಒಂದಲ್ಲಾ ಒಂದು ಫೋಟೋಶೂಟ್ ಅಥವಾ ವೀಡಿಯೋ ಮೂಲಕ ಸದ್ದು ಮಾಡ್ತಿರುತ್ತಾರೆ. ಇದೀಗ ಚಂದನ್ ಪತ್ನಿ, ನಿವೇದಿತಾ ಅವರ ಹೊಸ ಫೋಟೋಶೂಟ್ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

ರೀಲ್ಸ್‌ನಿಂದ ಅಪಾರ ಅಭಿಮಾನಿಗಳ ಗಮನ ಸೆಳೆದ ಬೆಡಗಿ ನಿವೇದಿತಾ ಗೌಡ ಅವರು ದೊಡ್ಮನೆ ಅಂಗಳಕ್ಕೆ ಕಾಲಿಟ್ಟು, ತಮ್ಮ ಬಬ್ಲಿ ಲುಕ್- ಕ್ಯೂಟ್ ಮಾತುಗಳು ಮೂಲಕ ಪ್ರೇಕ್ಷಕರನ್ನ ಗಮನ ಸೆಳೆದರು. ಬಳಿಕ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ (Chandan Shetty) ಅವರನ್ನ ಪ್ರೀತಿಸಿ ನಿವೇದಿತಾ ಮದುವೆಯಾದರು. ಮದುವೆಯ ಬಳಿಕವೂ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

ಕೆಂಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ ಫೋಟೋವನ್ನ ನಿವೇದಿತಾ ಶೇರ್ ಮಾಡಿದ್ದಾರೆ. ಬ್ರೈಡಲ್ ರೆಡ್ ಕಲರ್ (Red Saree) ಸೀರೆ ಜೊತೆ ಸ್ಲೀವ್‌ಲೆಸ್ ಬ್ಲೌಸ್ ಉಟ್ಟು ಆಭರಣ ಧರಿಸಿ ದೊಡ್ಡ ಗಾತ್ರದಲ್ಲಿ ಕುಂಕುಮ ಇಟ್ಟಿದ್ದರು. ಹಾಗೇ ರೆಡ್ ಲಿಪ್‌ಸ್ಟಿಕ್ ಹಚ್ಚಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿವೇದಿತಾ ಗೌಡ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದು, ನಿವೇದಿತಾಗೆ ರಾ ರಾ ನಾಗವಲ್ಲಿ ಅಂತ ಕರೆದು ನಾಗವಲ್ಲಿ ಪಟ್ಟ ಕೊಟ್ಟು ಟ್ರೋಲ್ ಮಾಡುತ್ತಿದ್ದಾರೆ.

‘ಗಿಚ್ಚಿ ಗಿಲಿ ಗಿಲಿ 2’ ಶೋ ನಂತರ ತಮ್ಮ ಯೂಟ್ಯೂಬ್ ಕೆಲಸದತ್ತ ನಿವೇದಿತಾ ಬ್ಯುಸಿಯಾಗಿದ್ದಾರೆ. ಸಿನಿಮಾ- ಕಿರುತೆರೆ ಅಂತಾ ಚಂದನ್ ಪತ್ನಿ ಆಕ್ಟೀವ್ ಆಗಿದ್ದಾರೆ.