ಪರ್ಸನಲ್‌, ಪ್ರೊಫೆಷನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ – ನಿವಿ ಮುಂದೆ ಚಂದನ್‌ ಹೀಗೇಕೆ ಹೇಳಿದ್ರು?

ಕ್ಯೂಟ್‌ ಕಪಲ್‌ ಎಂದೇ ಫೇಮಸ್‌ ಆಗಿದ್ದ ನಿವೇದಿತಾ ಗೌಡ, ಚಂದನ್‌ ಶೆಟ್ಟಿ (Chandan Shetty) ಅವರು ಇಂದು ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೆ ದಿನದ ಶೂಟಿಂಗ್​ನಲ್ಲಿ ಭಾಗಿಯಾಗಿದ್ರು. ಚಂದನ್‌ನ ಅಪ್ಪಿಕೊಂಡು ನಿವೇದಿತಾ ಕಣ್ಣೀರು ಹಾಕಿದ್ರು – ಅದಕ್ಕೆ ಅಪ್ಪಿಕೊಂಡೇ ಚಂದನ್‌ ಸಮಾಧಾನ ಮಾಡಿದ್ರು. ಶೂಟಿಂಗ್‌ ಕ್ಲೈಮ್ಯಾಕ್ಸ್‌ ಬಳಿಕ ಸುದ್ದಿಗೋಷ್ಠಿಯಲ್ಲಿ ಚಂದನ್‌ ಮಾತನಾಡುತ್ತಾ, ಹಲವು ವಿಚಾರಗಳನ್ನ ಹಂಚಿಕೊಂಡರು.

ಮನುಷ್ಯ ಅಂದಕೂಡಲೇ ಎಮೋಶನ್ಸ್‌ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. ನಿಜಕ್ಕೂ ನಮಗೆ ಇದು ಎಮೋಷನಲ್‌ ಆಗಿರುತ್ತದೆ. ಪರ್ಸನಲ್‌, ಪ್ರೊಫೆಶನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ. ಆದರೆ ಇಬ್ಬರೂ ಕರಿಯರ್‌ನಲ್ಲಿ ಮುಂದುವರೆಯಲೇಬೇಕು ಅಂತ ಹೇಳಿದ್ರು.

ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್‌ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್‌ ಆಗಿ ಸಪೋರ್ಟ್‌ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ ಅಂತ ಚಂದನ್‌ ತಿಳಿಸಿದ್ರು.

ಇನ್ನೂ ನಿವೇದಿತಾ ಗೌಡ ಮಾತನಾಡಿ, ನಾಲ್ಕು ವರ್ಷ ನಾವು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಷನಲ್‌ ಆಗಿತ್ತು. ಯಾವುದೇ ಪ್ರಾಜೆಕ್ಟ್‌ ಇದ್ದರೂ ಕೂಡ ಅದು ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್‌ ಮುಗಿಯುತ್ತಿದೆ, ಹಾಗಾಗಿ ಅಳು ಬಂತು. ಈ ಸಿನಿಮಾ ಕಥೆ ತುಂಬ ಚೆನ್ನಾಗಿದೆ. ನಿರ್ದೇಶಕರು ಅಷ್ಟು ಚೆನ್ನಾಗಿ ನನಗೆ ಅರ್ಥ ಮಾಡಿಸಿದ್ರು. ಹಾಗಾಗಿ ಒಪ್ಪಿಕೊಂಡೇ. ಮುಂದೆಯೂ ಒಳ್ಳೇ ಸ್ಟೋರಿ ಬಂದ್ರೆ ಇಬ್ಬರು ಒಟ್ಟಿಗೆ ನಟಿಸುವ ಬಗ್ಗೆ ಯೋಚನೆ ಮಾಡ್ತೀವಿ ಅಂತ ಸಹ ಹೇಳಿಕೊಂಡಿದ್ದಾರೆ.